2020ರೊಳಗೆ ದುಬೈನಲ್ಲಿ ಹಿಂದೂ ದೇಗುಲ?
Team Udayavani, Jul 25, 2018, 6:30 PM IST
ದುಬೈ: ದುಬೈನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಹಿಂದೂ ದೇಗುಲವು 2020ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಅಬುಧಾಬಿಯ ಮಾಧ್ಯಮಗಳು ವರದಿ ಮಾಡಿವೆ.
2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಬುಧಾಬಿಗೆ ಭೇಟಿ ನೀಡಿದ್ದಾಗ ಈ ದೇಗುಲ ನಿರ್ಮಾಣಕ್ಕೆ ಅಲ್ಲಿನ ಸರ್ಕಾರ ಅನುಮತಿ ನೀಡಿತ್ತು. ವಿಶ್ವದಾದ್ಯಂತ ನಾನಾ ಶಾಖೆಗಳನ್ನು ಹೊಂದಿರುವ ಗುಜರಾತ್‌ನ ಬಿಎಪಿಎಸ್ ಸ್ವಾಮಿನಾರಾಯಣ್ ಸಂಸ್ಥಾ, ಈ ದೇಗುಲ ನಿರ್ಮಿಸಲಿದೆ.
ಅಂದಹಾಗೆ, ದೇಗುಲ ನಿರ್ಮಾಣಕ್ಕಾಗಿ ರೂಪುಗೊಂಡಿರುವ ಸಮಿತಿಯು ಇನ್ನೊಂದು ತಿಂಗಳಲ್ಲಿ ನಿರ್ಮಾಣ ಕಾರ್ಯಕ್ಕೆ ಬೇಕಾಗುವ ಸಲಹೆಗಾರರನ್ನು ನೇಮಿಸಿಕೊಳ್ಳಲಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.