ಫಾರ್ಮಾಲಿನ್ ಭೀತಿ, ಪೂರೈಕೆ ಕೊರತೆ: ಗೋವೆಯಲ್ಲಿ ಮೀನು ಬೆಲೆ ಗಗನಕ್ಕೆ
Team Udayavani, Jul 25, 2018, 12:07 PM IST
ಪಣಜಿ : ಗೋವೆಯಲ್ಲಿ ಮೀನಿನ ಬೆಲೆ ಗಗನಕೇರಿದೆ. ಇದಕ್ಕೆ ಮುಖ್ಯ ಕಾರಣ ಫಾರ್ಮಾಲಿನ್ ವಿಷಕಾರಿ ರಾಸಾಯನಿಕ ಲೇಪಿತ ಮೀನುಗಳ ಆಮದನ್ನು ನಿಷೇಧಿಸಲಾಗಿರುವುದು ಮತ್ತು ಸ್ಥಳೀಯ ಮೀನು ಪರ್ಯಾಪ್ತ ಪ್ರಮಾಣದಲ್ಲಿ ಪೂರೈಕೆಯಾಗದಿರುವುದು ಎಂದು ಹೇಳಲಾಗಿದೆ. ಹಾಗಾಗಿ ನೂರು ರೂ. ಬೆಲೆಯ ಮೀನು ಈಗ 600ರಿಂದ 800 ರೂ. ಬೆಲೆಗೆ ತಲುಪಿದೆ.
ಈ ತಿಂಗಳ ಅಂತ್ಯದ ತನಕ ಮೀನು ಆಮದನ್ನು ರಾಜ್ಯ ಸರಕಾರ ನಿಷೇಧಿಸಿದೆ. ವಿಷಕಾರಿ ಫಾರ್ಮಾಲಿನ್ ಮೀನು ರಾಜ್ಯದ ಮಾರುಕಟ್ಟೆಯನ್ನು ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸಲು ಹೊರ ರಾಜ್ಯಗಳ ಮೀನು ಆಮದನ್ನು ಸರಕಾರ ನಿಷೇಧಿಸಿದೆ.
ಮೀನು ಲಭ್ಯತೆಯ ಮಾರ್ಗೋವಾ, ಪಣಜಿ, ಮಾಪುಸಾ ಮತ್ತು ವಾಸ್ಕೋ ದಲ್ಲಿನ ಮಾರುಕಟ್ಟೆಗಳಲ್ಲಿ ಮೀನೇ ಇಲ್ಲದಿರುವ ಸನ್ನಿವೇಶ ಎದುರಾಗಿದೆ. ಅಲ್ಪಸ್ವಲ್ಪ ಪ್ರಮಾಣದಲ್ಲಿ ಪೂರೈಕೆಯಾಗುವ ಸ್ಥಳೀಯ ಮೀನು ತುಂಬ ದುಬಾರಿಯಾಗಿದೆ.
ಮಳೆಗಾಲದ ಈ ದಿನಗಳಲ್ಲಿ ಸಮುದ್ರವು ಪ್ರಕ್ಷುಬ್ಧವಾಗಿರುವುದರಿಂದ ದೂರ ಮತ್ತು ಆಳ ಮೀನುಗಾರಿಕೆಗೆ ಈಗ ಅವಕಾಶ ಇರುವುದಿಲ್ಲ; ಹಾಗಾಗಿ ಸಾಂಪ್ರದಾಯಿಕ ಮೀನುಗಾರಿಕೆಯಿಂದ ಸಿಗುವ ಮೀನು ಅಲ್ಪ ಪ್ರಮಾಣದ್ದಾಗಿದ್ದು ಅದು ಗೋವೆಯ ಬೃಹತ್ ಮಾರುಕಟ್ಟೆಗೆ ಅಪರ್ಯಾಪ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ