ಬುದ್ಧಗಯಾ ಬಾಂಬ್ ಸ್ಫೋಟ:ಐವರು ಐಎಂ ಉಗ್ರರಿಗೆ ಜೀವಾವಧಿ ಶಿಕ್ಷೆ
Team Udayavani, Jun 2, 2018, 8:52 AM IST
ಪಟ್ನಾ: ಬುದ್ಧಗಯಾ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿಗಳಾದ ಇಂಡಿಯನ್ ಮುಜಾಹಿದೀನ್ (ಐ ಎಂ) ಉಗ್ರ ಸಂಘಟನೆಯ ಇಮ್‌ತಿ ಯಾಜ್ ಅನ್ಸಾರಿ, ಹೈದರ್ ಅಲಿ, ಮುಜಿಬ್ ಉಲ್ಲಾ, ಒಮೈರ್ ಸಿದ್ದಿಕಿ ಹಾಗೂ ಅಜರುದ್ದೀನ್ ಖುರೇಶಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದ ವಿಶೇಷ ನ್ಯಾಯಾಲಯದ ನ್ಯಾಯ ಮೂರ್ತಿ ಮನೋಜ್ ಕುಮಾರ್ ಸಿನ್ಹಾ, ಶಿಕ್ಷೆಯ ಜತೆಗೆ ತಲಾ 50 ಸಾವಿರ ರೂ. ದಂಡವನ್ನೂ ವಿಧಿಸಿದ್ದಾರೆ. ಇದೇ ಪ್ರಕರಣದ ಬಾಲಾಪರಾಧಿ ತೌಫಿಕ್ ಅಹ್ಮದ್‌ನನ್ನು ಕಳೆದ ವರ್ಷವೇ 3 ವರ್ಷಗಳ ಅವಧಿಗಾಗಿ ರಿಮಾಂಡ್ ಹೋಂಗೆ ಕಳುಹಿಸಲಾಗಿತ್ತು.
ಬುದ್ಧಗಯಾದಲ್ಲಿ 2013ರ ಜುಲೈ 7ರಂದು ಸರಣಿ ಸ್ಫೋಟ ಸಂಭವಿಸಿ, ಹಲವರು ಗಾಯ ಗೊಂಡಿದ್ದರು. ಈ ಪ್ರಕರಣದ ಆರು ಆರೋಪಿಗಳೂ 2013ರ ಅಕ್ಟೋಬರ್‌ನಲ್ಲಿ ಪಟ್ನಾದಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲೂ ಆರೋಪಿಗಳಾಗಿದ್ದು, ಅದರ ವಿಚಾರಣೆ ಇನ್ನೂ ಬಾಕಿ ಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬಯಿ -ಅಹ್ಮದಾಬಾದ್ ಹೆದ್ದಾರಿ: 12,000 ಲೀಟರ್ ತೈಲ ಇದ್ದ ಟ್ಯಾಂಕರ್ ಪಲ್ಟಿ
ಏಕರೂಪ ನಾಗರಿಕ ಸಂಹಿತೆ ಜಾರಿಗೆ ಪ್ರಧಾನಿಯನ್ನು ಒತ್ತಾಯಿಸಿದ ರಾಜ್ ಠಾಕ್ರೆ
ಅಸ್ಸಾಂನಲ್ಲಿ ಪೊಲೀಸ್ ಠಾಣೆಗೆ ಬೆಂಕಿ: ದುಷ್ಕರ್ಮಿಗಳ 5 ಮನೆಗಳು ನೆಲಸಮ
ಲೂಧಿಯಾನ ಬಾಂಬ್ ಸ್ಫೋಟ ಪ್ರಕರಣ ಭೇದಿಸಿದ ಎನ್‌ಐಎ; ಪ್ರಮುಖ ಆರೋಪಿಯ ಬಂಧನ
ಮರಕ್ಕೆ ಢಿಕ್ಕಿ ಹೊಡೆದ ಕಾರು: ಗೋವಾದಲ್ಲಿ ಬೆಳಗಾವಿ ಮೂಲದ ಮೂವರು ಸಾವು