ಕೈ ಸುಡಲಿದೆ ಆಹಾರ ಆ್ಯಪ್ ಸೇವೆ?
Team Udayavani, Sep 16, 2021, 6:40 AM IST
ನವದೆಹಲಿ: ನಗರ ಪಟ್ಟಣ ಪ್ರದೇಶಗಳಲ್ಲಿ ಆಹಾರ ಪೂರೈಕೆ ಮಾಡುವ ಝೊಮ್ಯಾಟೋ, ಸ್ವಿಗ್ಗಿ, ಫುಡ್ಪಂಡಾ ಸೇವೆಗಳು ದುಬಾರಿ ಯಾಗುವ ಆತಂಕ ಎದುರಾಗಿದೆ.
ಶುಕ್ರವಾರ ನಡೆಯಲಿರುವ ಜಿಎಸ್ಟಿ ಮಂಡಳಿ ಸಭೆಯಲ್ಲಿ ಎರಡೂ ಸಂಸ್ಥೆಗಳಿಗೆ “ರೆಸ್ಟಾರೆಂಟ್’ ಎಂಬ ಮಾನ್ಯತೆ ನೀಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ವಿತ್ತ ಸಚಿವಾಲಯ ಫಿಟ್ಮೆಂಟ್ ಕಮಿಟಿ ಆಹಾರ ವಿತರಿಸುವ ಆ್ಯಪ್ಗಳನ್ನು ಇ-ಕಾಮರ್ಸ್ ಕಂಪನಿಗಳನ್ನು ರೆಸ್ಟಾರೆಂಟ್ ಎಂಬ ವ್ಯಾಪ್ತಿಗೆ ಒಳಪಡಬೇಕು. ಅದಕ್ಕೆ ಅನುಗುಣವಾಗಿ ತೆರಿಗೆ ವಿಧಿಸಬೇಕು ಎಂದು ಶಿಫಾರಸು ಮಾಡಿದೆ.
ಪ್ರಸ್ತಾಪಕ್ಕೆ ಅನುಮೋದನೆ ಸಿಕ್ಕಿದರೆ ಅವುಗಳ ಸೇವೆಗಳು ದುಬಾರಿಯಾಗಲಿವೆ. ಸದ್ಯ ರೆಸ್ಟಾರೆಂ ಟ್ಗಳಿಂದಲೇ ಜಿಎಸ್ಟಿ ಸೇವೆ ಪಾವತಿಯಾಗುತ್ತಿದೆಯೇ ಹೊರತು ಆ್ಯಪ್ ಸಂಸ್ಥೆಗಳಿಂದ ಅಲ್ಲ.
ಪರಿಷ್ಕೃತ ಪರಿಹಾರ?: ಕೇಂದ್ರದಿಂದ ರಾಜ್ಯಗಳಿಗೆ ನೀಡಬೇಕಾಗಿರುವ ಪರಿಹಾರದ ಬಗ್ಗೆ ಕೂಡ ಲಕ್ನೋದಲ್ಲಿ ನಡೆಯಲಿರುವ 45ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ಚರ್ಚೆಯಾಗಲಿದೆ. ಕಂದಾಯ ಸಂಗ್ರಹ ಮತ್ತು ವ್ಯವಸ್ಥೆಯಲ್ಲಿನ ಲೋಪ, ರಸಗೊಬ್ಬರ, ಪಾದರಕ್ಷೆ, ಜವಳಿ ಕ್ಷೇತ್ರಗಳಿಗೆ ಯಾವ ರೀತಿ ನೆರವು ನೀಡಬೇಕು ಎಂಬ ಬಗ್ಗೆ ಕೂಡ ಮಂಡಳಿ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಪಾನ್ ಮಸಾಲಾಕ್ಕೆ ತೆರಿಗೆ ವಿಧಿಸುವ ಪ್ರಸ್ತಾಪ ಮುಂದೂಡುವ ಸಾಧ್ಯತೆಗಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು