Udayavni Special

ಕದ್ದ ಚಿನ್ನದ ಟಿಫಿನ್‌ ಬಾಕ್ಸ್‌ನಲ್ಲೇ ಊಟ!


Team Udayavani, Sep 12, 2018, 4:02 PM IST

gold.jpg

ಹೈದರಾಬಾದ್‌: ನಿಜಾಮರ ಕಾಲದ ಬಹುಕೋಟಿ ಮೊತ್ತದ ಚಿನ್ನದ ಟಿಫಿನ್‌ ಬಾಕ್ಸ್‌ ಸೇರಿದಂತೆ ಹಲವು ಅಮೂಲ್ಯ ವಸ್ತುಗಳನ್ನು ಕದ್ದೊಯ್ದಿದ್ದ ಕಳ್ಳರನ್ನು ಹೈದರಾಬಾದ್‌ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.  ಅಚ್ಚರಿ ಏನೆಂದರೆ, ದರೋಡೆ ಮಾಡಿದಂದಿ ನಿಂದಲೂ ಕಳ್ಳರಲ್ಲೊಬ್ಬ ಈ ದುಬಾರಿ ಬೆಲೆಯ ಬಾಕ್ಸ್‌ನಲ್ಲೇ ಆಹಾರ ಸೇವಿಸು ತ್ತಿದ್ದನಂತೆ!

ಹಾಲಿವುಡ್‌ ಸಿನಿಮಾ ಮಾದರಿಯಲ್ಲಿ ನಿಜಾಮ್‌ ಮ್ಯೂಜಿಯಂಗೆ ಲಗ್ಗೆಯಿಟ್ಟಿದ್ದ ಇಬ್ಬರು ದರೋಡೆಕೋರರು, ಅಲ್ಲಿಂದ ಅಮೂಲ್ಯ ವಸ್ತುಗಳನ್ನು ಹೊತ್ತುಕೊಂಡು ಮುಂಬೈಗೆ ಪರಾರಿಯಾಗಿದ್ದರು. ಅನಂತರ ಅಲ್ಲಿನ ಐಷಾರಾಮಿ ಹೋಟೆಲ್‌ ಒಂದರಲ್ಲಿ ವಸತಿ ಹೂಡಿದ್ದರು.

ಇವರು ಕದ್ದೊಯ್ದ ವಸ್ತುಗಳಲ್ಲಿ ನಿಜಾಮರ ಕಾಲದ ಟಿಫಿನ್‌ ಬಾಕ್ಸ್‌ ಕೂಡ ಒಂದು. ನಾಲ್ಕು ಕೆ.ಜಿ. ತೂಕದ ಈ ಟಿಫ‌ನ್‌ ಬಾಕ್ಸ್‌ ಮೂರು ಹಂತಗಳನ್ನು ಹೊಂದಿದ್ದು, ವಜ್ರ, ಮಾಣಿಕ್ಯ ಮತ್ತು ಪಚ್ಚೆಗಳನ್ನು ಉಪಯೋಗಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಸ್ವತಃ ನಿಜಾಮನೇ ಈ ಟಿಫ‌ನ್‌ ಬಾಕ್ಸ್‌ ಬಳಕೆ ಮಾಡಿದ್ದನೋ ಇಲ್ಲವೋ ಗೊತ್ತಿಲ್ಲ. ಆದರೆ ಕಳ್ಳರಲ್ಲೊಬ್ಬ ಇದನ್ನು ಪ್ರತಿದಿನದ ಆಹಾರ ಸೇವನೆಗೆ ಬಳಸುತ್ತಿದ್ದ ಎಂಬ ಅಂಶವನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಸೆ.2ರಂದು ಗ್ರಿಲ್‌ ಕಿತ್ತು, ಒಳ ನುಗ್ಗಿದ್ದ ಕಳ್ಳರು, ಮೊದಲು ಚಿನ್ನದ ಕವಚದೊಳಗೆ ಇರಿಸಲಾಗಿದ್ದ ಕುರಾನ್‌ ಅನ್ನು ಕದಿಯಲು ಹೊರಟಿದ್ದರು. ಅದನ್ನು ಸ್ಪರ್ಶಿಸಲು ಮುಂದಾಗುತ್ತಿದ್ದಂತೆ, ಸಮೀಪದ ಮಸೀದಿಯಿಂದ ಆಜಾನ್‌(ಪ್ರಾರ್ಥನೆಯ ಕರೆ) ಕೇಳಿಬಂದಿತ್ತಂತೆ. ಇದರಿಂದ ಭಯ ಭೀತರಾದ ಕಳ್ಳರು, ಕುರಾನ್‌ ಅನ್ನು ಬಿಟ್ಟು ಇತರೆ ವಸ್ತುಗಳನ್ನು ಕದ್ದೊಯ್ದಿದ್ದರು ಎಂದಿದ್ದಾರೆ ಹೈದರಾಬಾದ್‌ ಪೊಲೀಸ್‌ ಆಯುಕ್ತ ಅಂಜನಿ ಕುಮಾರ್‌. ಕಳ್ಳರ ಪತ್ತೆಗಾಗಿ 22 ತಂಡಗಳನ್ನು ರಚಿಸಿ, 300ಕ್ಕೂ ಹೆಚ್ಚು ಟವರ್‌ಗಳ ಡೇಟಾ ಪರಿಶೀಲಿಸಿ, ಕೊನೆಗೂ ಸೆರೆಹಿಡಿಯುವಲ್ಲಿ ಯಶಸ್ವಿಯಾದೆವು ಎಂದಿದ್ದಾರೆ. ಕದ್ದ ವಸ್ತುಗಳಿಗೆ ದುಬೈ ಮಾರುಕಟ್ಟೆಯಲ್ಲಿ 30-40 ಕೋಟಿ ರೂ.ಸಿಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

100 ತಿಂಗಳಾದ್ರೂ ಹೋರಾಟ ನಿಲ್ಲಬಾರದು : ರೈತ ಪ್ರತಿಭಟನೆಯಲ್ಲಿ ಪ್ರಿಯಾಂಕಾ ಕರೆ

PM Modi Replies To Mamata Banerjee’s “Khela Hobe”, Says “Listen Didi…”

ದೀದಿ, ಇದನ್ನು ಕೇಳಿ.. ಟಿ ಎಮ್ ಸಿ ಪ್ರಚಾರ ಗೀತೆಗೆ ಪ್ರಧಾನಿ ಅವರ ಪ್ರತಿಕ್ರಿಯೆ..!

BJP ಹಣ ಕೊಟ್ರೆ ತೆಗೆದುಕೊಂಡು TMCಗೆ ಮತ ಹಾಕಿ : ದೀದಿ ಕಿಡಿ

ದೀದಿಯ ಸ್ಕೂಟಿ ನಂದಿಗ್ರಾಮದಲ್ಲಿ ಬಿದ್ದರೆ ನಾನೇನು ಮಾಡಲಿ : ಮೋದಿ

ನನ್ನ ಬಳಿ ಯಾವುದೇ ಗಣ್ಯರ ಲೈಂಗಿಕ ಹಗರಣದ ಯಾವುದೇ ಸಿಡಿ ಇಲ್ಲ: ಮುಲಾಲಿ

ನನ್ನ ಬಳಿ ಯಾವುದೇ ಗಣ್ಯರ ಲೈಂಗಿಕ ಹಗರಣದ ಸಿಡಿ ಇಲ್ಲ: ಮುಲಾಲಿ

Navajuddin

ವಿಚ್ಛೇದನದಿಂದ ಹಿಂದೆ ಸರಿದ ಪತ್ನಿ…ಮತ್ತೆ ಒಂದಾದ ನಟ ನವಾಜುದ್ದೀನ್ ದಂಪತಿ  

ಉಡುಪಿ ಪೇಜಾವರ ಮಠದಲ್ಲಿ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡ

ಉಡುಪಿ ಪೇಜಾವರ ಮಠದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

100 ತಿಂಗಳಾದ್ರೂ ಹೋರಾಟ ನಿಲ್ಲಬಾರದು : ರೈತ ಪ್ರತಿಭಟನೆಯಲ್ಲಿ ಪ್ರಿಯಾಂಕಾ ಕರೆ

PM Modi Replies To Mamata Banerjee’s “Khela Hobe”, Says “Listen Didi…”

ದೀದಿ, ಇದನ್ನು ಕೇಳಿ.. ಟಿ ಎಮ್ ಸಿ ಪ್ರಚಾರ ಗೀತೆಗೆ ಪ್ರಧಾನಿ ಅವರ ಪ್ರತಿಕ್ರಿಯೆ..!

BJP ಹಣ ಕೊಟ್ರೆ ತೆಗೆದುಕೊಂಡು TMCಗೆ ಮತ ಹಾಕಿ : ದೀದಿ ಕಿಡಿ

ದೀದಿಯ ಸ್ಕೂಟಿ ನಂದಿಗ್ರಾಮದಲ್ಲಿ ಬಿದ್ದರೆ ನಾನೇನು ಮಾಡಲಿ : ಮೋದಿ

fhghg

ನೀವು ‘ದೀದಿ’ಯಾಗಿಲ್ಲ, ‘ಅತ್ತೆ’ಯಾಗಿ ಯಾಕೆ ಉಳಿದಿದ್ದೀರಿ : ಮಮತಾಗೆ ಮೋದಿ ವ್ಯಂಗ್ಯ

MUST WATCH

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

udayavani youtube

ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

ಹೊಸ ಸೇರ್ಪಡೆ

Bidar

ಯುಜಿಡಿ ಅಕ್ರಮ: ಕ್ರಿಮಿನಲ್‌ ಪ್ರಕರಣ ದಾಖಲಿಸಲು ನಿರ್ಧಾರ

PDO

ಜಲಕ್ಷಾಮಕ್ಕೆ ಪಿಡಿಒಗಳೇ ಹೊಣೆ: ನಾಡಗೌಡ

100 ತಿಂಗಳಾದ್ರೂ ಹೋರಾಟ ನಿಲ್ಲಬಾರದು : ರೈತ ಪ್ರತಿಭಟನೆಯಲ್ಲಿ ಪ್ರಿಯಾಂಕಾ ಕರೆ

bidar protest

ಪಶು ವೈದ್ಯಕೀಯ ವಿವಿ ವಿಭಜನೆಗೆ ವಿರೋಧ

Traffic

ಟ್ರಾಫಿಕ್‌ ಕಿರಿಕಿರಿ: ನಿಲ್ಲದ ಪ್ರಯಾಣಿಕರ ಯಾತನೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.