ಸಾಲ ಮನ್ನಾ ದಾಖಲೆಗಳನ್ನು ಮಾಜಿ ಸಿಎಂ ಚೌಹಾಣ್ಮನೆ ಮುಂದೆ ಸುರಿದರು!
Team Udayavani, May 8, 2019, 5:27 AM IST
ಭೋಪಾಲ್: ಮಧ್ಯಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ, ಸಾಲ ಮನ್ನಾ ಮಾಡಲೇ ಇಲ್ಲ ಎಂಬ ಬಿಜೆಪಿಯ ಆರೋಪಕ್ಕೆ ಕಾಂಗ್ರೆಸ್ ನಾಯಕರು ಅಚ್ಚರಿಯ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಾಲ ಮನ್ನಾ ಮಾಡಿರುವ ಲೋಡುಗಟ್ಟಲೆ ದಾಖಲೆಗಳನ್ನು ಬಿಜೆಪಿ ನಾಯಕ, ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಮನೆಯ ಮುಂದೆ ರಾಶಿ ಹಾಕಿ ಹೋಗಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರವು 21 ಲಕ್ಷ ರೈತರ ಸಾಲ ಮನ್ನಾ ಮಾಡಿರುವ ದಾಖಲೆಗಳು ಇಲ್ಲಿವೆ ನೋಡಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಸುರೇಶ್ ಪಚೌರಿ ಅವರು ಮಂಗಳವಾರ ಚೌಹಾಣ್ ಮನೆ ಮುಂದೆ ದಾಖಲೆಗಳನ್ನು ಸುರಿದು ಹೋಗಿದ್ದಾರೆ. ಎರಡು ವಾಹನಗಳಲ್ಲಿ ದಾಖಲೆಗಳನ್ನು ತರಲಾಗಿತ್ತು. ಪಚೌರಿಗೆ ಸಚಿವ ಪಿ.ಸಿ.ಶರ್ಮಾ ಮತ್ತು ಕಾಂಗ್ರೆಸ್ನ ಇತರೆ ನಾಯಕರೂ ಸಾಥ್ ನೀಡಿದ್ದಾರೆ. ಆದರೆ, ಕಾಂಗ್ರೆಸ್ನ ವಾದವನ್ನು ಚೌಹಾಣ್ ತಿರಸ್ಕರಿಸಿದ್ದು, ‘ಇದು ಸುಳ್ಳುಗಳ ಬಂಡಲ್’ ಎಂದು ಜರೆದಿದ್ದಾರೆ. ಈ ನಡುವೆ, ಮಂಗಳವಾರ ಮಾತನಾಡಿದ ಮಧ್ಯಪ್ರದೇಶ ಸಿಎಂ ಕಮಲ್ನಾಥ್, ‘ಅಧಿಕಾರಕ್ಕೆ ಬಂದ ಕೆಲವೇ ಗಂಟೆ ಗಳಲ್ಲಿ ನಾವು ಸಾಲ ಮನ್ನಾ ಆದೇಶವನ್ನು ಹೊರಡಿಸಿದ್ದೇವೆ. ಪ್ರಕ್ರಿಯೆ ಮುಂದುವರಿಯುತ್ತಿದೆ. ಈಗಾಗಲೇ 21.06 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
ನೀವು ಬದುಕಿದ್ದಾಗಲೂ, ಸತ್ತಾಗಲೂ ಲೂಟಿ ಮಾಡುವುದೇ ಕಾಂಗ್ರೆಸ್ನ ಮಂತ್ರ: ಮೋದಿ