ಲೋಕಸಭೆಯಲ್ಲಿ ಎಸ್ಪಿಜಿ ಭದ್ರತಾ ಮಸೂದೆ ಮಂಡನೆ!
Team Udayavani, Nov 25, 2019, 9:15 PM IST
ನವದೆಹಲಿ: ಕೇಂದ್ರ ಸರ್ಕಾರ ಎಸ್ಪಿಜಿ ಭದ್ರತಾ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ. ಈ ಹೊಸ ಮಸೂದೆಯ ಪ್ರಕಾರ, ಮಾಜಿ ಪ್ರಧಾನ ಮಂತ್ರಿಯ ಕುಟುಂಬಕ್ಕೆ ಎಸ್ಪಿಜಿ ರಕ್ಷಣೆ ನೀಡಲಾಗುವುದಿಲ್ಲ. ಈ ಪ್ರಕಾರ, ಮಾಜಿ ಪ್ರಧಾನ ಮಂತ್ರಿಗಳ ಕುಟುಂಬ ಸದಸ್ಯರನ್ನು ಉನ್ನತ ಮಟ್ಟದ ವಿಶೇಷ ಸಂರಕ್ಷಣಾ ಕಮಾಂಡೋಗಳು ರಕ್ಷಣೆ ನೀಡುವುದಿಲ್ಲ ಎನ್ನಲಾಗಿದೆ.
ಹೊಸ ಮಸೂದೆಯಡಿಯಲ್ಲಿ, ಹಾಲಿ ಪ್ರಧಾನಮಂತ್ರಿಗಳ ಕುಟುಂಬವು ಪ್ರಧಾನ ಮಂತ್ರಿಯೊಂದಿಗೆ ಅವರ ಸರ್ಕಾರಿ ನಿವಾಸದಲ್ಲಿದ್ದರೆ ಮಾತ್ರ ಎಸ್ಪಿಜಿ ರಕ್ಷಣೆ ಪಡೆಯುತ್ತದೆ. ಮಾಜಿ ಪ್ರಧಾನಿ ಮತ್ತು ಅವರ ಕುಟುಂಬಕ್ಕೆ ಐದು ವರ್ಷಗಳ ಕಾಲ ಎಸ್ಪಿಜಿ ರಕ್ಷಣೆ ನೀಡಲಾಗುವುದು. ಆದರೆ ಮಾಜಿ ಪ್ರಧಾನ ಮಂತ್ರಿಯೊಂದಿಗೆ ವಾಸಿಸಿದರೆ ಮಾತ್ರ ಮಾಜಿ ಪ್ರಧಾನಿ ಕುಟುಂಬಕ್ಕೆ ಎಸ್ಪಿಜಿ ಭದ್ರತೆ ನೀಡಲಾಗುವುದು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಎಸ್ಪಿಜಿ ಕವರ್ ರದ್ದುಪಡಿಸಿದ ಎರಡು ವಾರಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. 1991ರಲ್ಲಿ ಎಲ್ಟಿಟಿಇ ಭಯೋತ್ಪಾದಕರು ರಾಜೀವ್ ಗಾಂಧಿಯವರ ಹತ್ಯೆಯ ನಂತರ ಮಾಜಿ ಪ್ರಧಾನ ಮಂತ್ರಿಗಳು ಮತ್ತು ಅವರ ಕುಟುಂಬ ಸದಸ್ಯರನ್ನು ಎಸ್ಪಿಜಿ ಕವರ್ ಗೆ ಸೇರಿಸಲಾಯಿತು. ಅದಕ್ಕೂ ಮೊದಲು ಪ್ರಧಾನಿಗೆ ಮಾತ್ರ ಎಸ್ಪಿಜಿ ರಕ್ಷಣೆಯನ್ನು ನೀಡಲಾಗುತ್ತಿತ್ತು.ಈಗ ಅದನ್ನೇ ನೂತನ ಮಸೂದೆಯಲ್ಲಿ ಪುನಃ ಪರಿಚಯಿಸಲ್ಪಟ್ಟಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ