
ಮಾಜಿ RJD ಸಂಸದ ಶಹಾಬುದ್ದೀನ್ ಸೋದರ ಸಂಬಂಧಿ ಸಿವಾನ್‌ನಲ್ಲಿ ಹತ್ಯೆ
Team Udayavani, Feb 2, 2019, 7:08 AM IST

ಸಿವಾನ್ : ಕೊಲೆ ಅಪರಾಧಕ್ಕೆ ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಿ ಪ್ರಕೃತ ಜೈಲಿನಲ್ಲಿರುವ ಮಾಜಿ ಆರ್‌ಜೆಡಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ನ ಸೋದರ ಸಂಬಂಧಿ ಮೊಹಮ್ಮದ್ ಯೂಸುಫ್ ನನ್ನು ಅಪರಿಚಿತ ಹಂತಕರು ಸಿವಾನ್ ನಲ್ಲಿ ನಿನ್ನೆ ಶುಕ್ರವಾರ ತಡ ರಾತ್ರಿ ಗುಂಡಿಕ್ಕಿ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ಚುರುಕಿನ ತನಿಖೆ ನಡೆಸುತ್ತಿದ್ದಾರೆ.
ಮೊಹಮ್ಮದ್ ಯೂಸುಫ್ ನನ್ನು ಪ್ರತಾಪ್‌ಪುರ ಗ್ರಾಮದಲ್ಲಿ ಹಂತಕರು ಗುಂಡೆಸೆದು ಕೊಂದರೆ ಎಂದು ಸಿವಾನ್ ಪೊಲೀಸ್ ಸುಪರಿಂಟೆಂಡೆಂಟ್ ನವೀನ್ ಚಂದರ್ ಝಾ ತಿಳಿಸಿದರು.
ಹಂತಕರು ನೇರವಾಗಿ ಎದೆಗೆ ಗುಂಡು ಹೊಡೆದ ಕಾರಣ ಯೂಸುಫ್ ಸ್ಥಳದಲ್ಲೇ ಮೃತಪಟ್ಟ ಎಂದು ಝಾ ತಿಳಿಸಿದರು. ಯೂಸುಫ್, ಜೈಲುಪಾಲಾಗಿರುವ ಶಹಾಬುದ್ದೀನ್ ಪುತ್ರ ಮೊಹಮ್ಮದ್ ಒಸಾಮಾ ಗೆ ನಿಕಟನಾಗಿದ್ದ ಎಂದವರು ಹೇಳಿದರು.
ಈ ಕೊಲೆ ಕೃತ್ಯವನ್ನು ಖಂಡಿಸಿ ಶಹಾಬುದ್ದೀನ್‌ನ ಬೆಂಬಲಿಗರು ಒಡನೆಯೇ ರೋಡ್ ಬ್ಲಾಕ್ ಮಾಡಿ ಅಪರಾಧಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ನಿಕಟವರ್ತಿಯಾಗಿರುವ ಶಹಾಬುದ್ದೀನ್, ಸಿವಾನ್ ನ ಪ್ರಬಲ ಡಾನ್ ಎಂದೇ ಕುಖ್ಯಾತ. 2015ರ ಡಿಸೆಂಬರ್ 9ರಂದು ನಡೆದಿದ್ದ ಪತ್ರಕರ್ತನ ಕೊಲೆ ಕೇಸಿನಲ್ಲಿ ಅಪರಾಧಿ ಎಂದು ಪರಿಗಣಿಸಲ್ಪಟ್ಟು ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರಕ್ಕೆ ಅಭೂತಪೂರ್ವ ಆರಂಭ

ದೆಹಲಿ ನ್ಯಾಯಾಲಯದಿಂದ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ವಜಾ

ಮುಳುಗುತ್ತಿದ್ದವರನ್ನು ರಕ್ಷಿಸಿದ ಬಾಲಕನಿಗೆ ಗೋವಾ ಮುಖ್ಯಮಂತ್ರಿಯಿಂದ 1 ಲಕ್ಷ ರೂ. ಬಹುಮಾನ

ಪ್ರಧಾನಿ ಮೋದಿ ಪದವಿಯ ವಿವರ ಪ್ರಶ್ನೆ;ಕೇಜ್ರಿವಾಲ್‌ಗೆ ದಂಡ ಹಾಕಿದ ಕೋರ್ಟ್

ಪಟಿಯಾಲಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ನವಜೋತ್ ಸಿಂಗ್ ಸಿಧು