ತಾಜ್ ಮಹಲ್ ಆವರಣದಲ್ಲಿ ನಮಾಜ್: ನಾಲ್ವರ ಬಂಧನ
Team Udayavani, May 26, 2022, 8:39 PM IST
ಆಗ್ರಾ: ತಾಜ್ ಮಹಲ್ ಆವರಣದಲ್ಲಿರುವ ಶಾಹಿ ಮಸೀದಿಯಲ್ಲಿ ನಮಾಜ್ ಮಾಡಿದ ನಾಲ್ವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153 ರ ಅಡಿಯಲ್ಲಿ ‘ಗಲಭೆಗಳನ್ನು ಉಂಟುಮಾಡುವ ಉದ್ದೇಶದಿಂದ ಪ್ರಚೋದನೆಗಾಗಿ’ ಪ್ರಕರಣ ದಾಖಲಿಸಲಾಗಿದೆ.
ಬುಧವಾರ ತಾಜ್ ಮಹಲ್ ಆವರಣದಲ್ಲಿರುವ ಮಸೀದಿಯಲ್ಲಿ ನಮಾಜ್ ಮಾಡಿದ ನಾಲ್ವರು ಪ್ರವಾಸಿಗರನ್ನು ಬಂಧಿಸಲಾಗಿದೆ. ಅವರಲ್ಲಿ ಮೂವರು ಹೈದರಾಬಾದ್‌ನವರು ಮತ್ತು ಒಬ್ಬರು ಅಜಂಗಢದವರು. ಅವರ ವಿರುದ್ಧ ಐಪಿಸಿ ಸೆಕ್ಷನ್ 153 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : ಚಾಲೀಸಾ ಪಠಿಸಿದರೆ ಕೊಲೆ : ಸಂಸದೆ ನವನೀತ್ ರಾಣಾಗೆ ಬೆದರಿಕೆ ಕರೆ
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಪ್ರಕಾರ ಶುಕ್ರವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ತಾಜ್ ಮಹಲ್ ಆವರಣದಲ್ಲಿ ನಮಾಜ್ ಮಾಡುವುದನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನಿಷೇಧಿಸಲಾಗಿದೆ. ಶುಕ್ರವಾರದಂದು ಸಹ, ತಾಜ್‌ಗಂಜ್ ಪ್ರದೇಶದ ನಿವಾಸಿಗಳಿಗೆ ಮಾತ್ರ ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ನಮಾಜ್ ಮಾಡಲು ಅವಕಾಶವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೇರಳ: ಸಂವಿಧಾನ ವಿರೋಧಿ ಹೇಳಿಕೆ:ಭಾರೀ ಆಕ್ರೋಶದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಸಾಜಿ ರಾಜೀನಾಮೆ
ಮುಂಬಯಿಯಲ್ಲಿ ಮುಂದುವರಿದ ವರ್ಷಧಾರೆ; ಭೂಕುಸಿತ-ತಗ್ಗುಪ್ರದೇಶ ಜಲಾವೃತ, ಟ್ರಾಫಿಕ್ ಜಾಮ್
ಗೋವಾ ರಾಜ್ಯಾದ್ಯಂತ ಭಾರಿ ಮಳೆ ; ಜನಜೀವನ ಅಸ್ತವ್ಯಸ್ಥ
ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ; ಉಪರಾಷ್ಟ್ರಪತಿಯಾಗಿ ಆಯ್ಕೆ?
ಕಾಳಿ ಮಾತೆ ವಿರುದ್ಧ ಹೇಳಿಕೆ:ಟಿಎಂಸಿಯಿಂದ ಮೊಯಿತ್ರಾ ಉಚ್ಛಾಟಿಸಿ: ಮಮತಾಗೆ ಬಿಜೆಪಿ ಗಡುವು
MUST WATCH
ಹೊಸ ಸೇರ್ಪಡೆ
ಕೊಟ್ಟಿಗೆಹಾರ : ಚಲಿಸುತ್ತಿದ್ದ ಕಾರಿನ ಮೇಲೆ ಬಿತ್ತು ಭಾರಿ ಗಾತ್ರದ ಮರದ ಕೊಂಬೆ…
ಸಿದ್ದರಾಮಯ್ಯರನ್ನು ನೋಡಿದರೆ ನನಗೆ ತುಂಬಾ ಕನಿಕರ ಬರುತ್ತದೆ: ಸಿಎಂ ಬೊಮ್ಮಾಯಿ
ಮಳೆ ರೆಡ್ ಅಲರ್ಟ್; ದಕ್ಷಿಣ ಕನ್ನಡ, ಉಡುಪಿಯಲ್ಲಿ ಶಾಲಾ-ಕಾಲೇಜುಗಳಿಗೆ ನಾಳೆ ರಜೆ
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ: ಕ್ರಮಕ್ಕೆ ಉಡುಪಿ ಜಿಲ್ಲಾಡಳಿತದಿಂದ ದೂರು
ಹೆಣ್ಣುಮಕ್ಕಳಿಗೆ ಉಚಿತವಾಗಿ ಮುಟ್ಟಿನ ಕಪ್ ವಿತರಿಸುವ ಚಿಂತನೆ: ಡಾ.ಕೆ.ಸುಧಾಕರ್