ನವೆಂಬರ್‌ 30ರ ವರೆಗೆ ಉಚಿತ ಫಾಸ್ಟ್ಯಾಗ್‌

Team Udayavani, Nov 23, 2019, 6:30 AM IST

ಹೊಸದಿಲ್ಲಿ: ಡಿ.1ರಿಂದ ಫಾಸ್ಟಾಗ್‌ ಕಡ್ಡಾಯ ಮಾಡಿರುವುದರಿಂದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ನ. 30ರ ವರೆಗೆ ಉಚಿತವಾಗಿ ಫಾಸ್ಟ್ಯಾಗ್‌ ಅನ್ನು ನೀಡಲು ನಿರ್ಧರಿಸಿದೆ. ಜತೆಗೆ ಪ್ರತಿ ಖಾತೆಗೆ ನೀಡುವ ಭದ್ರತಾ ಠೇವಣಿಯನ್ನೂ ಅದೇ ಪಾವತಿ ಮಾಡಲಿದೆ. ವಾಹನ ಮಾಲಕರು ಮತ್ತು ಚಾಲಕರಿಗೆ ತೊಂದರೆಯಾಗದಂತೆ ಈ ವ್ಯವಸ್ಥೆ ರೂಪಿಸುತ್ತಿದ್ದೇವೆ ಎಂದು ಕೇಂದ್ರ ಹೆದ್ದಾರಿ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ನವೆಂಬರ್‌ 30ರ ವರೆಗೆ ಮಾತ್ರ ಎನ್‌ಎಚ್‌ಎಐ ವತಿಯಿಂದ ವಾಹನ ಚಾಲಕ, ಮಾಲಕರಿಗೆ ಉಚಿತವಾಗಿ ಈ ಸೌಲಭ್ಯ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಎಷ್ಟು ಮೊತ್ತದ ರೀಚಾರ್ಜ್‌ ಮಾಡಿಸಬೇಕು ಎನ್ನು ವುದು ಅವರವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸಚಿವರು ಹೇಳಿದ್ದಾರೆ. ದೇಶದ ವಿವಿಧ ಸ್ಥಳಗಳಲ್ಲಿ ಫಾಸ್ಟ್ಯಾಗ್‌ ಮಾರಾಟ ಮಾಡುವುದಕ್ಕಾಗಿಯೇ 27 ಸಾವಿರ ಪಾಯಿಂಟ್‌ ಆಫ್ ಸೇಲ್ಸ್‌ ಮೆಷಿನ್‌ಗಳನ್ನು ಸ್ಥಾಪಿಸಲಾಗಿದೆ ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ