3,451 ಯಾತ್ರಿಕರ ಹೊಸ ತಂಡದ ಅಮರನಾಥ ಯಾತ್ರೆ ಆರಂಭ
Team Udayavani, Jul 13, 2018, 11:50 AM IST
ಜಮ್ಮು : ಅತ್ಯಂತ ಬಿಗಿ ಭದ್ರತೆಯ ನಡುವೆ ಇಂದು 3,451 ಯಾತ್ರಿಕರನ್ನು ಒಳಗೊಂಡ ತಂಡವು ವಾರ್ಷಿಕ ಅಮರಾನಾಥ ಯಾತ್ರೆಗಾಗಿ ಇಲ್ಲಿಂದ ಕಾಶ್ಮೀರಕ್ಕೆ ಹೊರಟಿತೆಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿ 3,880 ಮೀಟರ್ ಎತ್ತರದಲ್ಲಿರುವ ಅಮರನಾಥ ಗುಹಾ ದೇವಾಲಯದ ವಾರ್ಷಿಕ ಯಾತ್ರೆಯ 60 ದಿನಗಳದ್ದಾಗಿದ್ದು ಕಳೆದ ಜೂನ್ 28ರಂದು ಆರಂಭಗೊಂಡಿತ್ತು. ಈ ವರೆಗೆ ಈ ಋತುವಿನಲ್ಲಿ 1.51 ಲಕ್ಷ ಯಾತ್ರಿಕರು ಅಮರನಾಥ ಯಾತ್ರೆಯನ್ನು ಕೈಗೊಂಡಿದ್ದಾರೆ.
ಅಮರನಾಥ ಯಾತ್ರಿಕರು ಇಂದು ಅನಂತನಾಗ್ನ ಪೆಹಲ್ಗಾಂವ್ ಮತ್ತು ಗಂದೇರ್ಬಾಲ್ ಜಿಲ್ಲೆಯ ಬಲ್ತಾಲ್ ಮೂಲ ಅವಳಿ ಶಿಬಿರದೆಡೆಗೆ ಎರಡು ಪ್ರತ್ಯೇಕ ಸರತಿಯ ವಾಹನಗಳಲ್ಲಿ ಇಲ್ಲಿನ ಭಗವತೀ ನಗರದ ಮೂಲ ಶಿಬಿರದಿಂದ ಇಂದು ನಸುಕಿನ ವೇಳೆ ಯಾತ್ರೆಯನ್ನು ಆರಂಭಿಸಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ