
ಮನೆ ಸ್ವಚ್ಛವಿದ್ದರೆ ಟಿವಿ, ಮೊಬೈಲ್ ಗಿಫ್ಟ್!
Team Udayavani, Oct 26, 2021, 10:00 PM IST

ಮಧ್ಯಪ್ರದೇಶ: ಮನೆ ಸ್ವಚ್ಛವಿದ್ದರೆ ಮನಸ್ಸು ಸ್ವಚ್ಛವಿರುತ್ತದೆ ಎಂಬ ಮಾತಿದೆ. ಅದನ್ನು ಮಧ್ಯಪ್ರದೇಶ ಸರ್ಕಾರ ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.
ರಾಜಧಾನಿ ಭೋಪಾಲ್ ಹೊರವಲಯದ ಬೈರಸಿಯಾದಲ್ಲಿ ಹೆಚ್ಚು ಸ್ವಚ್ಛತೆ ಕಾಪಾಡಿಕೊಂಡಿರುವ ಮನೆಗಳಿಗೆ ಟಿವಿ, ಮೊಬೈಲ್‌ನಂತಹ ದುಬಾರಿ ಗಿಫ್ಟ್ ನೀಡಿದೆ.
ಬ್ಲಾಕ್‌ನಲ್ಲಿ ಮನೆಗಳಲ್ಲಿನ ಶೌಚಾಲಯ ಮತ್ತು ಮನೆಯ ಸುತ್ತಲಿನ ವಾತಾವರಣ ಎಷ್ಟು ಸ್ವಚ್ಛವಾಗಿದೆ ಎನ್ನುವುದನ್ನು ಪರಿಗಣಿಸಿ 71 ಮನೆಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಲಕ್ಕಿ ಡ್ರಾ ಮಾಡಿ ಅನೇಕರಿಗೆ ಗಿಫ್ಟ್ ಕೊಡಲಾಗಿದೆ.
ಟಾಪ್ ನ್ಯೂಸ್
