ಅತ್ಯಾಚಾರ ಸಂತ್ರಸ್ತೆ ಮೇಲೆ 5ನೇ ಬಾರಿ ಆ್ಯಸಿಡ್‌

Team Udayavani, Jul 3, 2017, 3:45 AM IST

ಲಕ್ನೋ: ಉತ್ತರಪ್ರದೇಶದ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಮೇಲೆ ದುಷ್ಕರ್ಮಿಗಳು ಆ್ಯಸಿಡ್‌ ದಾಳಿ ನಡೆಸಿದ್ದಾರೆ. ಇದು ಆಕೆಯ ಮೇಲೆ ನಡೆಯುತ್ತಿರುವ 5ನೇ ಆ್ಯಸಿಡ್‌ ದಾಳಿ. ಶನಿವಾರ ರಾತ್ರಿ ಆಕೆ ತಂಗಿದ್ದ ಹಾಸ್ಟೆಲ್‌ ಹೊರಗೆ ಈ ಘಟನೆ ನಡೆದಿದ್ದು,  ಮುಖ ಮತ್ತು ಕುತ್ತಿಗೆಯಲ್ಲಿ ಸುಟ್ಟ ಗಾಯಗಳಾಗಿರುವ ಆಕೆ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮಾ. 23ರಂದು ಇದೇ ಮಹಿಳೆಗೆ ರೈಲಿನಲ್ಲಿ ಬಲವಂತವಾಗಿ ಇಬ್ಬರು ಆ್ಯಸಿಡ್‌ ಕುಡಿಸಿದ್ದರು. ಸಿಎಂ ಆದಿತ್ಯನಾಥ್‌ ಆಸ್ಪತ್ರೆಗೆ ಭೇಟಿ ನೀಡಿ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜತೆಗೆ, ಮಹಿಳೆಯ ಆರೋಪದ ಬಗ್ಗೆ ಅನುಮಾನವಿದ್ದು, ನಿಜಕ್ಕೂ ದಾಳಿ ನಡೆಯಿತೇ ಎಂಬುದನ್ನು ದೃಢಪಡಿಸಬೇಕಿದೆ ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ