ರಾಜ್‌ಭರ್‌ಗೆ ಗೇಟ್‌ಪಾಸ್‌

Team Udayavani, May 21, 2019, 6:31 AM IST

ಲಕ್ನೋ: ತಮ್ಮ ಸಂಪುಟದಲ್ಲೇ ಇದ್ದುಕೊಂಡು ಬಿಜೆಪಿ ಮತ್ತು ಎನ್‌ಡಿಎಗೆ ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದ ಸುಹೇಲ್‌ದೇವ್‌ ಭಾರತೀಯ ಸಮಾಜ್‌ ಪಾರ್ಟಿ(ಎಸ್‌ಬಿಎಸ್‌ಪಿ) ನಾಯಕ ಓಂಪ್ರಕಾಶ್‌ ರಾಜ್‌ಭರ್‌ ವಿರುದ್ಧ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕೊನೆಗೂ ಕ್ರಮ ಕೈಗೊಂಡಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದ ಬೆನ್ನಲ್ಲೇ ಸೋಮವಾರ ರಾಜ್‌ಭರ್‌ರನ್ನು ಕೂಡಲೇ ಸಂಪುಟದಿಂದ ವಜಾ ಮಾಡುವಂತೆ ರಾಜ್ಯಪಾಲರಿಗೆ ಸಿಎಂ ಯೋಗಿ ಶಿಫಾರಸು ಮಾಡಿದ್ದಾರೆ. ಇದಕ್ಕೆ ರಾಜ್ಯ ಪಾಲ ರಾಮ್‌ ನಾಯ್ಕ ಕೂಡ ಒಪ್ಪಿಗೆ ನೀಡಿದ್ದಾರೆ.

ರಾಜ್ಯಪಾಲರ ಸಮ್ಮತಿ ಸಿಗುತ್ತಿದ್ದಂತೆಯೇ, ಹಿಂದುಳಿದ ವರ್ಗಗಳ ಕ್ಷೇಯೋಭಿವೃದ್ಧಿ ಮತ್ತು ದಿವ್ಯಾಂಗಜನರ ಸಬಲೀಕರಣ ಸಚಿವ ಸ್ಥಾನದಿಂದ ರಾಜ್‌ಭರ್‌ಗೆ ಗೇಟ್‌ಪಾಸ್‌ ನೀಡಲಾಗಿದೆ. ಅಷ್ಟೇ ಅಲ್ಲ, ಎಸ್‌ಬಿಎಸ್‌ಪಿ ಪಕ್ಷದ ಇತರೆ ಎಲ್ಲ ಸದಸ್ಯರನ್ನೂ ರಾಜ್ಯ ಖಾತೆ ಸಹಾಯಕ ಸಚಿವರ ಸ್ಥಾನಗಳಿಂದ ವಜಾ ಮಾಡುವಂತೆಯೂ ಆದಿತ್ಯನಾಥ್‌ ಶಿಫಾರಸು ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳ ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಈ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ರಾಜ್‌ಭರ್‌, “ವಿಳಂಬವಾದರೂ ಮುಖ್ಯಮಂತ್ರಿಯವರು ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ. ನನ್ನನ್ನು ವಜಾ ಮಾಡುವ ನಿರ್ಧಾÃವನ್ನು ನಾನು ಸ್ವಾಗತಿಸುತ್ತೇನೆ. 20 ದಿನಗಳ ಹಿಂದೆಯೇ ಈ ನಿರ್ಧಾರ ಘೋಷಿಸಬೇಕಿತ್ತು’ ಎಂದೂ ಹೇಳಿದ್ದಾರೆ. ವಜಾ ಗೊಂಡ ಬೆನ್ನಲ್ಲೇ ಬಿಜೆಪಿ ಕೂಡ ಪ್ರತಿಕ್ರಿಯಿಸಿದ್ದು, ಮಿತ್ರಪಕ್ಷವಾಗಿ ದ್ದರೂ ಬಿಜೆಪಿ ವಿರುದ್ಧ ಹೇಳಿಕೆ ನೀಡುವ ಮೂಲಕ ರಾಜ್‌ಭರ್‌ ಅವರು ಮೈತ್ರಿಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಹೇಳಿದೆ.

ವಿವಾದಿತ ಹೇಳಿಕೆಗಳು: ಇತ್ತೀಚೆಗೆ ರಾಜ್‌ಭರ್‌ ಅವರು ಬಿಜೆಪಿ ವಿರುದ್ಧವೇ ಟೀಕಿಸಲು ಆರಂಭಿಸಿದ್ದರು. ಅದರಲ್ಲೂ ಲೋಕಸಭೆ ಚುನಾವಣೆಯ ಸಮಯದಲ್ಲೇ ಅವರು, ಬಿಜೆಪಿ ಸದಸ್ಯರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೆ, ರಾಜ್ಯದ ಹಲವು ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರ ಜೊತೆಗೆ, ಇನ್ನು ಕೆಲವೆಡೆ ಎಸ್‌ಪಿ-ಬಿಎಸ್ಪಿ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸುವ ಮೂಲಕ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ