ಶೇ. 6.6ಕ್ಕೆ ಕುಸಿದ ದೇಶದ ಜಿಡಿಪಿ
Team Udayavani, Mar 1, 2019, 1:15 AM IST
ಹೊಸದಿಲ್ಲಿ: ಭಾರತದ ಜಿಡಿಪಿ ಪ್ರಸ್ತುತ ವಿತ್ತ ವರ್ಷದ ಅಕ್ಟೋಬರ್-ಡಿಸೆಂಬರ್ ತ್ತೈಮಾಸಿಕದಲ್ಲಿ ಶೇ. 6.6ಕ್ಕೆ ಕುಸಿದಿದೆ. ಇದು ಕಳೆದ ಐದು ತ್ತೈಮಾಸಿಕಗಳಲ್ಲೇ ಅತ್ಯಂತ ಕನಿಷ್ಠವಾಗಿದೆ.
ದೇಶದ ಸಾಂಖೀÂಕ ಇಲಾಖೆ ಜಿಡಿಪಿ ಶೇ. 7.2 ರಷ್ಟಾಗಲಿದೆ ಎಂದು ಅಂದಾಜಿಸಿತ್ತು. 2011-12ರ ಮೂಲ ವರ್ಷದ ಆಧಾರದಲ್ಲಿ ಕಳೆದ ವಿತ್ತ ವರ್ಷದ ಇದೇ ತ್ತೈಮಾಸಿಕದಲ್ಲಿ ಶೇ. 7.7 ಆಗಿತ್ತು. 218-19ರ ಈ ತ್ತೈಮಾಸಿಕಲ್ಲಿ ಜಿಡಿಪಿ ಮೌಲ್ಯ 35 ಲಕ್ಷ ಕೋಟಿ ರೂ. ಆಗಿದ್ದು, 217-18ರ ಮೂರನೇ ತ್ತೈಮಾಸಿಕದಲ್ಲಿ ಇದು 32.85 ಲಕ್ಷ ರೂ. ಆಗಿತ್ತು. ಇನ್ನೊಂದೆಡೆ 2018-19ರ ಜಿಡಿಪಿ ಮುನ್ನೋಟವನ್ನು ಕೇಂದ್ರ ಸಾಂಖೀÂಕ ಇಲಾಖೆಯು ಶೇ. 7.2 ರಿಂದ ಶೇ. 7ಕ್ಕೆ ಇಳಿಕೆ ಮಾಡಿದೆ. ಕಳೆದ ಫೆ.7 ರಂದು ಆರ್ಬಿಐ ತನ್ನ ದ್ವೆ„ಮಾಸಿಕ ವಿತ್ತ ನೀತಿಯಲ್ಲಿ ರೆಪೋ ದರವನ್ನು ಶೇ. 0.25ರಷ್ಟು ಇಳಿಕೆ ಮಾಡಿತ್ತು. ಚಿಲ್ಲರೆ ದರ ಆಧರಿತ ಹಣದುಬ್ಬರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಮತ್ತು ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಆರ್ಬಿಐ ಈ ಕ್ರಮ ಕೈಗೊಂಡಿತ್ತು.
ಎಂಟು ಉದ್ಯಮ ವಲಯಗಳು ಜನವರಿಯಲ್ಲಿ 19 ತಿಂಗಳುಗಳಲ್ಲೇ ವಹಿವಾಟು ಕುಸಿತ ಅನುಭವಿಸಿವೆ. ಕಚ್ಚಾ ತೈಲ, ರಿಫೈನರಿ ಉತ್ಪನ್ನಗಳು ವಿದ್ಯುತ್ ಕ್ಷೇತ್ರಗಳು ಕುಸಿತ ಕಂಡಿವೆ.