2022ರೊಳಗೆ ಐದು ಥಿಯೇಟರ್‌ ಕಮಾಂಡ್‌

Team Udayavani, Feb 18, 2020, 1:42 AM IST

ಹೊಸದಿಲ್ಲಿ: ದೇಶದ ಸೇನಾ ಪಡೆಗಳ ಜಂಟಿ ಸೇವೆಗಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿರುವ ಸುಮಾರು ಐದು ಕಮಾಂಡ್‌ಗಳನ್ನು ಹೊರತು ಪಡಿಸಿ, ಜಮ್ಮುಕಾಶ್ಮೀರಕ್ಕಾಗಿಯೇ ಪ್ರತ್ಯೇಕ ಕಮಾಂಡ್‌ ಒಂದು ಸ್ಥಾಪಿಸಲು ನಿರ್ಧರಿಸಿರುವುದಾಗಿ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಬಿಪಿನ್‌ ರಾವತ್‌ ಹೇಳಿದ್ದಾರೆ.

ನಿರ್ದಿಷ್ಟ ಉದ್ದೇಶದ ಈಡೇರಿಕೆಗಾಗಿ ಭೂಸೇನೆ, ವಾಯು ಸೇನೆ ಹಾಗೂ ನೌಕಾಪಡೆಗಳನ್ನು ಏಕಕಾಲದಲ್ಲಿ ನಿರ್ವಹಿಸುವ ಸಂವಹನ ವ್ಯವಸ್ಥೆಯನ್ನು ಥಿಯೇಟರ್‌ ಕಮಾಂಡ್‌ ಎಂದು ಕರೆಯಲಾಗುತ್ತದೆ. ಇಂಥ 5 ಕಮಾಂಡ್‌ ವ್ಯವಸ್ಥೆಗಳನ್ನು 2022ರೊಳಗೆ ಭಾರತ ಹೊಂದಲಿದೆ.

ಹೊಸ ವ್ಯವಸ್ಥೆಯಡಿ, ದೇಶದ ಒಂದೊಂದು ಕಮಾಂಡ್‌ಗಳ ಉಸ್ತುವಾರಿಯನ್ನು ಹೊಸದಾಗಿ ನೇಮಕವಾಗುವ ಕಮಾಂಡರ್‌ಗೆ ನೀಡಲಾಗುತ್ತದೆ. ಆ ಕಮಾಂಡ್‌ ವ್ಯಾಪ್ತಿಯ ತೊಂದರೆಗಳನ್ನು ನಿಭಾಯಿಸಲು ಆತ ಯಾರ ಅನುಮತಿಗೂ ಕಾಯದೇ ಕಾರ್ಯ ತಂತ್ರಗಳನ್ನು ರೂಪಿಸಿ ಜಾರಿಗೊಳಿಸಬಹುದಾಗಿದೆ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ