ಯುಪಿ:ನಮಸ್ಕಾರ ಸ್ವೀಕರಿಸದ ಜರ್ಮನ್‌ ಪ್ರಜೆಗೆ ಥಳಿತ

Team Udayavani, Nov 5, 2017, 10:13 AM IST

ಲಕ್ನೋ: ತಾನು ನೀಡಿದ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಜರ್ಮನ್‌ ಪ್ರಜೆಯೊಬ್ಬರಿಗೆ ಥಳಿಸಿದ ಘಟನೆ ಉತ್ತರ ಪ್ರದೇಶದ ಸೋನ್‌ಭದ್ರಾದ ರೈಲು ನಿಲ್ದಾಣದಲ್ಲಿ ನಡೆದಿದೆ.

ವರದಿಯಾದಂತೆ ಅಗೋರಿಗೆ ಪ್ರಯಾಣಿಸಲು ರೈಲಿಗಾಗಿ ಕಾಯುತ್ತಿದ್ದ ಬರ್ಲಿನ್‌ ಮೂಲದ ಹೋಲ್ಗರ್‌ ಎರಿಕ್‌ ಎನ್ನುವ ವ್ಯಕ್ತಿಗೆ ಅಮನ್‌ ಕುಮಾರ್‌ ಎಂಬ ಎಲೆಕ್ಟ್ರೀಷಿಯನ್‌ ನಮಸ್ಕಾರ ನೀಡಿ ಸ್ವಾಗತ ಕೋರಿದ್ದು, ಅದಕ್ಕೆ ಎರಿಕ್‌ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲಎನ್ನಲಾಗಿದ್ದು,  ಇದರಿಂದ ಕುಪಿತನಾದ ಅಮನ್‌ ಎರಿಕ್‌ರನ್ನು ನೆಲಕ್ಕೆ ಬೀಳಿಸಿ ಹಿಗ್ಗಾಮುಗ್ಗಾ ಥಳಿಸಿರುವುದಾಗಿ  ದೂರಿನಲ್ಲಿ ಹೇಳಿಕೊಳ್ಳಲಾಗಿದೆ.

ಘಟನೆ ನಡೆದ ತಕ್ಷಣ ಆರೋಪಿ ಅಮನ್‌ನನ್ನು ಪೊಲೀಸರು  ವಶಕ್ಕೆ ಪಡೆದು ವಿಚಾರಣೆ ನಡೆಸಿ ತನಿಖೆ ಮುಂದುವರಿಸಿದ್ದಾರೆ. 

ಆದರೆ ದೂರನ್ನು ನಿರಾಕರಿಸಿರುವಆರೋಪಿ  ಅಮನ್‌ ‘ನಾನು ಮುಗ್ಧ, ಎರಿಕ್‌ಗೆ ವೆಲ್‌ಕಮ್‌ ಟು ಇಂಡಿಯಾ ಎಂದು ಸ್ವಾಗತಕೋರಿದ್ದು ಅದಕ್ಕೆ ಆತ ಉದ್ಧಟತನ ತೋರಿ  ನನಗೆ ಹೊಡೆದು, ಉಗಿದಿದ್ದಾನೆ’ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. 

ಆಗ್ರಾದಲ್ಲಿ ಸ್ವಿಟ್ಜರ್‌ಲ್ಯಾಂಡ್‌ ಮೂಲದ ಪ್ರೇಮಿಗಳ ಮೇಲೆ ನಡೆದ ಗುಂಪು ದಾಳಿಯ ಬೆನ್ನಲ್ಲೇ ವಿದೇಶಿ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ