ಜರ್ಮನಿ ನೌಕಾಪಡೆಯ ಮುಖ್ಯಸ್ಥ ರಾಜೀನಾಮೆ
ಸಂವಾದ ಕಾರ್ಯಕ್ರಮವೊಂದರಲ್ಲಿ ಉಕ್ರೇನ್-ರಷ್ಯಾ ಗಡಿ ವಿವಾದದ ಬಗ್ಗೆ ಮಾತು
Team Udayavani, Jan 23, 2022, 9:30 PM IST
ನವದೆಹಲಿ: ಭಾರತಕ್ಕೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಕ್ರೇನ್ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿ ವಿವಾದಕ್ಕೆ ಸಿಲುಕಿದ್ದ ಜರ್ಮನಿ ನೌಕಾಪಡೆಯ ಮುಖ್ಯಸ್ಥ ವೈಸ್ ಅಡ್ಮಿರಲ್ ಕೇ-ಆಚಿಮ್ ಶೋನ್‌ಬ್ಯಾಕ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಕಳೆದ ಶುಕ್ರವಾರ ನವದೆಹಲಿಯ ಮನೋಹರ್ ಪರ್ರಿಕರ್ ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಆ್ಯಂಡ್ ಅನಾಲಿಸಿಸ್‌ನಲ್ಲಿ (ಎಂಪಿಐಡಿಎಸ್‌ಎ) ನಡೆದಿದ್ದ ಸಂವಾದ ಕ್ರಾಯಕ್ರಮವೊಂದಲ್ಲಿ ಭಾಷಣ ಮಾಡಿದ್ದ ಅವರು, “2014ರಲ್ಲಿ ಉಕ್ರೇನ್‌ನಿಂದ ರಷ್ಯಾ ಕಿತ್ತುಕೊಂಡಿರುವ ಕ್ರಿಮಿಯಾ ಪರ್ಯಾಯ ದ್ವೀಪವು, ಪುನಃ ಉಕ್ರೇನ್‌ಗೆ ಎಂದಿಗೂ ದಕ್ಕಲ್ಲ. ಇದು ಸತ್ಯ. ಅಸಲಿಗೆ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಕ್ರಿಮಿಯಾ ಪರ್ಯಾಯ ದ್ವೀಪವನ್ನು ಕಟ್ಟಿಕೊಂಡು ಏನೂ ಆಗಬೇಕಿಲ್ಲ. ಆದರೆ, ತಾನು ಅಂದುಕೊಂಡಿದ್ದನ್ನು ಸಾಧಿಸುತ್ತೇನೆ ಎಂಬುದನ್ನು ಜಗತ್ತಿಗೆ ಮನವರಿಕೆ ಮಾಡಿಕೊಡಲು ಪುಟಿನ್ ಈ ಹೆಜ್ಜೆಯಿಟ್ಟಿದ್ದರು. ಇವರ ಈ ದಿಟ್ಟ ನಡೆಯು ಗೌರವಕ್ಕೆ ಅರ್ಹವಾದಂಥದ್ದು” ಎಂದಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಇಂದು 50 ಸಾವಿರ ಕೋವಿಡ್ ಕೇಸ್ : 165 ಹೊಸ ಒಮಿಕ್ರಾನ್; 19 ಸಾವು
ಉಕ್ರೇನ್‌ಗೆ ಕಿರುಕುಳ ಕೊಡುವ ಉದ್ದೇಶದಿಂದ ರಷ್ಯಾ, ಉಕ್ರೇನ್-ರಷ್ಯಾ ಗಡಿಯುದ್ದಕ್ಕೂ ಶಸ್ತ್ರಸಜ್ಜಿತ ಸೇನೆ ನಿಯೋಜಿಸಲು ನಿರ್ಧರಿಸಿದೆ. ಇದನ್ನು ಅಮೆರಿಕ ಸೇರಿದಂತೆ ಅನೇಕ ದೇಶಗಳು ಖಂಡಿಸಿವೆ. ಯು.ಕೆ. ಮತ್ತು ಅಮೆರಿಕ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕ ಬೆಂಬಲಕ್ಕೆ ನಿಂತಿದೆ. ಆದರೆ, ಜರ್ಮನಿ ಈ ಕೆಲಸಕ್ಕೆ ಒಲ್ಲೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜೀವ್ ಹತ್ಯೆ ಪ್ರಕರಣ:ಜೀವಾವಧಿ ಶಿಕ್ಷೆಗೊಳಗಾಗಿದ್ದ ಪೆರಾರಿವಾಳನ್ ಬಿಡುಗಡೆಗೆ ಸುಪ್ರೀಂ ಆದೇಶ
ಹಾಸಿಗೆಗಾಗಿ ಆನೆಯ ಕಿತ್ತಾಟ -ವಿಡಿಯೋ ವೈರಲ್
ಮತ್ತೆ ಆರೆಂಜ್ ಅಲರ್ಟ್; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ರಾಮ ಮಂದಿರ ಅಡಿಪಾಯ ಆಗಸ್ಟ್ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ
ಪತ್ನಿಗೆ ಸೀರೆ ಉಡಲು ಬರುವುದಿಲ್ಲ: ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ !