ಇಫ್ತಾರ್ ವಿವಾದದಲ್ಲಿ ಸಚಿವ ಗಿರಿರಾಜ್‌ಸಿಂಗ್
Team Udayavani, Jun 5, 2019, 6:00 AM IST
ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್, ಡಿಸಿಎಂ ಸುಶೀಲ್ ಕುಮಾರ್ ಮೋದಿ, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಭಾಗವಹಿಸಿದ್ದ ಇಫ್ತಾರ್ ಕೂಟದ ಫೋಟೋವೊಂದಕ್ಕೆ ಟೀಕೆ ವ್ಯಕ್ತಪಡಿಸಿರುವ ಕೇಂದ್ರ ಸಚಿವ, ಬಿಜೆಪಿ ನಾಯಕ ಗಿರಿರಾಜ್ ಸಿಂಗ್, ವಿವಾದದಲ್ಲಿ ಸಿಲುಕಿದ್ದಾರೆ. ಫೋಟೋವನ್ನು ಉದ್ದೇ ಶಿಸಿ ಅವರು, “”ಈ ನಾಯಕರು ಇಫ್ತಾರ್ ಕೂಟ ಆಯೋಜಿಸಿದಂತೆ ನವರಾತ್ರಿಯ ಉಪವಾಸದ ವೇಳೆ ಯಲ್ಲೂ ಉಪಾಹಾರ ಕೂಟವನ್ನು ಆಯೋಜಿಸಿದರೆ ಉತ್ತಮ” ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು.
ಇದು ಕೇಂದ್ರ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲಿಲ್ಲವೆಂದು ಈಗಾಗಲೇ ಸಂಪುಟದಿಂದ ದೂರ ಉಳಿದಿರುವ ಜೆಡಿಯು ನಾಯಕರನ್ನು ಕೆರಳಿಸಿದೆ. ಗಿರಿರಾಜ್ ವಿರುದ್ಧ ಜೆಡಿಯು ನಾಯಕರ ಅಸಮಾಧಾನ ಭುಗಿಲೇಳುತ್ತಲೇ, ಇತ್ತ ಗೃಹ ಸಚಿವ ಅಮಿತ್ ಶಾ ಅವರು, ಗಿರಿರಾಜ್ ಸಿಂಗ್‌ಗೆ ಅವಹೇಳನಕಾರಿ ಹೇಳಿಕೆ ನೀಡದಂತೆ ಎಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444