ಹಾಸ್ಟೆಲ್ ಮೇಟ್ ಗಳ ಖಾಸಗಿ ವಿಡಿಯೋ ಲೀಕ್ ಮಾಡಿದ ವಿದ್ಯಾರ್ಥಿನಿ: ಭಾರೀ ಪ್ರತಿಭಟನೆ; ಬಂಧನ
Team Udayavani, Sep 18, 2022, 11:12 AM IST
ಚಂಡೀಗಢ: ರಾಜ್ಯದ ಖಾಸಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಆಕ್ಷೇಪಾರ್ಹ ವೀಡಿಯೊಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಮೊಹಾಲಿಯ ವಿದ್ಯಾರ್ಥಿನಿಯೊಬ್ಬರನ್ನು ಚಂಡೀಗಢ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಘಟನೆಯ ವಿರುದ್ಧ ಶನಿವಾರ ತಡರಾತ್ರಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ತೆರಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಒಬ್ಬ ವಿದ್ಯಾರ್ಥಿ ಕುಸಿದುಬಿದ್ದು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗಿದ್ದು, ಆರೋಪಿ ವಿದ್ಯಾರ್ಥಿನಿಯನ್ನು ಬಂಧಿಸಲಾಗಿದೆ ಎಂದು ಡಿಎಸ್ ಪಿ ರೂಪಿಂದರ್ ಕೌರ್ ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಪಂಜಾಬ್ ಶಾಲಾ ಶಿಕ್ಷಣ ಸಚಿವ ಎಚ್‌ಎಸ್ ಬೈನ್ಸ್, ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಶಾಂತವಾಗಿರುವಂತೆ ಮನವಿ ಮಾಡಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಇಂದು ವಿಷ್ಣುವರ್ಧನ್ ಹುಟ್ಟುಹಬ್ಬ: ಅಭಿಮಾನಿಗಳಿಂದ ಹಲವು ಕಾರ್ಯಕ್ರಮ
ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿನಿಯು ತನ್ನ ಸಹವರ್ತಿಯರ ಖಾಸಗಿ ವಿಡಿಯೋಗಳನ್ನು ಮಾಡಿ ಅದನ್ನು ಹಿಮಾಚಲ ಪ್ರದೇಶದಲ್ಲದ್ದ ವ್ಯಕ್ತಿಯೊಬ್ಬನಿಗೆ ಕಳುಹಿಸುತ್ತಿದ್ದಳು. ಆತ ಈ ಎಂಎಂಎಸ್ ಕ್ಲಿಪ್ ಗಳನ್ನು ಇಂಟರ್ನೆಟ್ ಗೆ ಅಪ್ಲೋಡ್ ಮಾಡುತ್ತಿದ್ದ. ವಿದ್ಯಾರ್ಥಿನಿಯರು ಸ್ನಾನ ಮಾಡುವ ವಿಡಿಯೋಗಳು ಇಂಟರ್ನೆಟ್ ನಲ್ಲಿ ಹರಿದಾಡಿದೆ.
ಹಾಸ್ಟೆಲ್ ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದು, ಇದು ಕೇವಲ ವದಂತಿ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉತ್ತಮ ಉದ್ಯೋಗಿ – ಉದ್ಯಮಿಗಳ ನೀಡಿದ “ಐಬಿಎಂಆರ್ ವಿದ್ಯಾಸಂಸ್ಥೆ”
ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್
ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಆಸ್ಟ್ರೇಲಿಯದ ಆರೋನ್ ಫಿಂಚ್
ಬೆಳ್ತಂಗಡಿ: ಉಜಿರೆ ಲಾಡ್ಜ್ ಗಳ ಮೇಲೆ ಏಕಕಾಲದಲ್ಲಿ ಎಸ್.ಪಿ. ನೇತೃತ್ವದಲ್ಲಿ ದಾಳಿ
ಮಂಗಳವಾರದ ರಾಶಿ ಭವಿಷ್ಯ: ಈ ರಾಶಿ ಅವರಿಗಿಂದು ಗೃಹ ಆಸ್ತಿ ಸಂಬಂಧ ಚಿಂತೆ ಎದುರಾದೀತು