ಅತ್ಯಾಚಾರಕ್ಕೆ ಪ್ರತಿರೋಧ: ಟೆರೇಸ್ನಿಂದ ಹುಡುಗಿಯ ಕೆಳದೂಡಿದ ಕಾಮುಕ
Team Udayavani, May 2, 2018, 12:13 PM IST
ಲಕ್ನೋ : ಕಾಮುಕ ದಾಳಿಕೋರನಿಂದ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ಯತ್ನಿಸಿದ ಹದಿ ಹರೆಯದ ಹುಡುಗಿಯನ್ನು ಕಾಮುಕನು ಟೆರೇಸ್ನಿಂದ ಕೆಳಕ್ಕೆ ದೂಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಿನ್ನೆ ಮಂಗಳವಾರ ನಡೆದಿದೆ.
ಲೈಂಗಿಕ ದಾಳಿಕೋರನು ಕಳೆದ ಕೆಲ ಸಮಯದಿಂದ ನನ್ನ ಮಗಳನ್ನು ಪೀಡಿಸುತ್ತಿದ್ದ ಎಂದು ಹುಡುಗಿಯ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.
ನಿನ್ನೆ ಮಂಗಳವಾರ ಕಾಮುಕನು ಹುಡುಗಿಯನ್ನು ಆಕೆಯ ಮನೆಯ ಟೆರೇಸ್ನಲ್ಲಿ ಸಂಪರ್ಕಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ. ಅದನ್ನು ತೀವ್ರವಾಗಿ ಪ್ರತಿರೋಧಿಸಿದ ಆಕೆಯನ್ನು ಆತ ಟೆರೇಸ್ನಿಂದ ಕೆಳಕ್ಕೆ ದೂಡಿ ಆಕೆಯನ್ನು ಗಂಭೀರವಾಗಿ ಗಾಯಗೊಳಿಸಿದ.
ಹುಡುಗಿಯು ಪ್ರಕೃತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಲೆ. ಪೊಲೀಸರು ಆರೋಪಿ ಕಾಮುಕನ ವಿರುದ್ಧ ಪೋಕ್ಸೋ ಮತ್ತು ಎಸ್ಸಿ/ಎಸ್ಟಿ ಕಾಯಿದೆಯಡಿ ಕೇಸುದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಈ ತನಕ ಆರೋಪಿಯನ್ನು ಬಂಧಿಸಿಲ್ಲ ಎಂದು ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…