ಬಯಲಲ್ಲೇ ಸ್ನಾನ, ಶೌಚ : ಮ.ಪ್ರ.ದ ಹಾಸ್ಟೆಲ್ ವಿದ್ಯಾರ್ಥಿನಿಯರ ಪಾಡಿದು
Team Udayavani, May 11, 2018, 12:39 PM IST
ದಾಮೋಹ್, ಮಧ್ಯ ಪ್ರದೇಶ : ದೇಶದ ಬಹುತೇಕ ಎಲ್ಲ ರಾಜ್ಯಗಳು ಬಯಲು ಶೌಚ ಮುಕ್ತ ವಾಗುವ ದಿಶೆಯಲ್ಲಿ ಸಕಲ ಯತ್ನಗಳನ್ನು ಮಾಡುತ್ತಿರುವಂತೆಯೇ ಬಿಜೆಪಿ ಆಡಳಿತೆ ಇರುವ ಮಧ್ಯಪ್ರದೇಶದ ಮದಿಯಾದೋಹ್ ಎಂಬ ಗ್ರಾಮದಲ್ಲಿನ ಸರಕಾರಿ ಶಾಲೆಯ ಹಾಸ್ಟೆಲ್ನ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತೆರೆದ ಬಯಲಲ್ಲೇ ಸ್ನಾನ, ಶೌಚ ಮಾಡಬೇಕಾದ ಅನಿವಾರ್ಯತೆಗೆ ಗುರಿಯಾಗಿದ್ದಾರೆ.
ಹಾಸ್ಟೆಲ್ ಶೌಚಾಲಯದಲ್ಲಿ ನೀರಿನ ಕೊರತೆ ಇರುವುದರಿಂದ ವಿದ್ಯಾರ್ಥಿನಿಯರು ಬಯಲಲ್ಲೇ ಸ್ನಾನ ಶೌಚ ಮಾಡಬೇಕಾದ ಅನಿವಾರ್ಯತೆ ಒದಗಿದೆ ಎಂದು ಹಾಸ್ಟೆಲ್ನ ವಾರ್ಡನ್ ಅವರೇ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮದಿಯಾದೋಹ್ ಸರಕಾರಿ ಹಾಸ್ಟೆಲ್ನಲ್ಲಿ 6ನೇ ತರಗತಿಯಂದ 12ನೇ ತರಗತಿಯ ವರೆಗೆ ಕಲಿಯುವ ನೂರಕ್ಕೂ ಅಧಿಕ ವಿದ್ಯಾರ್ಥಿನಿಯರು ಇದ್ದಾರೆ. ಕಳೆದ ಕೆಲವು ತಿಂಗಳಿಂದ ಈ ಹಾಸ್ಟೆಲ್ಗೆ ನೀರು ಪೂರೈಕೆಯಾಗುತ್ತಿಲ್ಲ. ಹಾಸ್ಟೆಲ್ ನ ಎರಡೂ ಬೋರ್ವೆಲ್ಗಳಲ್ಲಿ ಈಗ ನೀರಿಲ್ಲ. ನೀರು ಬೇಕಿದ್ದರೆ ಎರಡು ಕಿ.ಮೀ. ದೂರದ ನಲ್ಲಾ ದಿಂದ ತರಬೇಕಾಗಿದೆ. ಹಾಗಾಗಿ ವಿದ್ಯಾರ್ಥಿನಿಯರು ತೆರೆದ ಬಯಲಲ್ಲೇ ಸ್ನಾನ ಶೌಚ ಮಾಡುವ ದುರ್ಗತಿಗೆ ಒಳಗಾಗಿದ್ದಾರೆ ಎಂದು ಹಾಸ್ಟೆಲ್ ವಾರ್ಡನ್ ಕಾಂತಿ ಆಹಿರ್ವಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…