ಜಿ ಮೇಲ್ಗೆ ಸಿಕ್ಕಿದೆ ಹೊಸತನ
Team Udayavani, Apr 26, 2018, 6:00 AM IST
ಹೊಸದಿಲ್ಲಿ: ವಿಶ್ವದ ಜನಪ್ರಿಯ ಇ-ಮೇಲ್ ಸೇವಾ ತಾಣದ ಜಿಮೇಲ್ನ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆ ಆಗಿದೆ. ತಿಂಗಳ ಹಿಂದಷ್ಟೇ ಗೂಗಲ್ ಜಿಮೇಲ್ ಹೊಸ ವಿನ್ಯಾಸ ಪಡೆದುಕೊಳ್ಳುವ ಬಗ್ಗೆ ಮುನ್ಸೂಚನೆ ನೀಡಿತ್ತು. ಇದೀಗ ಅಧಿಕೃತವಾಗಿ ಬದಲಾವಣೆಯ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡಿದೆ.
ಹ್ಯಾಕ್ ಆಗಬಹುದಾದ ಎಲ್ಲಾ ಸಾಧ್ಯತೆ ಗಳಿಗೆ ಇನ್ನಷ್ಟು ಭದ್ರತೆಯ ವಿಶ್ವಾಸ ಮೂಡುವ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಮೇಲ್ ವ್ಯವಸ್ಥೆಯಲ್ಲಿಯೂ ಬದಲಾ ವಣೆ ಮಾಡಲಾಗಿದೆ ಎಂದು ಜಿಮೇಲ್ನ ಪ್ರಾಡಕ್ಟ್ ಮ್ಯಾನೇಜರ್ ಜಾಕೊಬ್ ಬ್ಯಾಂಕ್ ಹೇಳಿದ್ದಾರೆ. ಈಗಲೇ ಎಲ್ಲರಿಗೂ ಬದಲಾದ ವಿನ್ಯಾಸ ಲಭ್ಯವಿಲ್ಲ. ಬದಲಾಯಿಸಿಕೊಳ್ಳಲು ಸಂದೇಶದ ಬಳಿಕ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.
ಏನೇನೆಲ್ಲಾ ಹೊಸತು?: ಒಟ್ಟಾರೆ ವಿನ್ಯಾಸ ದಲ್ಲಿ ಹೇಳಿಕೊಳ್ಳುವ ಬದಲಾವಣೆಯೇನು ಮಾಡದೇ ಇದ್ದರೂ, ಬಳಕೆದಾರರಿಗೆ ಇನ್ನಷ್ಟು ಸ್ನೇಹಿಯಾಗಿರುವಂತೆ ವಿನ್ಯಾಸಗೊಳಿಸಲಾ ಗಿದೆ. ಇನ್ಬಾಕ್ಸ್ ಒಂದೇ ಆಗದೆ, ಬಳಕೆದಾರನ ಅಗತ್ಯಕ್ಕೆ ತಕ್ಕಂತೆ ಬದಲಾಯಿ ಸಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸ ಲಾಗಿದೆ. ಆಚೀìವ್ನಲ್ಲಿ ಹೊಸ ವಿನ್ಯಾಸಗಳ ಬಗ್ಗೆ ವಿವರ ಸಿಗುವಂತೆ ಮಾಡಲಾಗಿದೆ.
ಇನ್ಬಾಕ್ಸ್ನಲ್ಲಿ ಸರ್ಜ್ಎಂಜಿನ್ ಆಪ್ಶನ್ ಸುಲಭವಾಗಿ ಲಭ್ಯವಾಗುವಂತೆ ಮಾಡಲಾ ಗಿದೆ. ಹೊಸದಾಗಿ ಪರಿಚಯಿಸಲಾದ “ಕಾನ್ಫಿ ಡೆನ್ಷಿಯಲ್ ಮೋಡ್’ ಪ್ರಯೋಜನ ಕಾರಿ ಯಾಗಿದೆ. ಹೊಸ ಮೇಲ್ ಸಿದ್ಧ ಪ ಡಿ ಸಿದ ಬಳಿಕ ಅದನ್ನು ಕಳುಹಿಸುವಾಗ ಆ ಮೇಲ್ ಅನ್ನು ಫಾರ್ವರ್ಡ್, ಕಾಪಿ ಆ್ಯಂಡ್ ಪೇಸ್ಟ್, ಡೌನ್ಲೋಡ್ ಅಥವಾ ಪ್ರಿಂಟ್ ಕೂಡ ತೆಗೆಯಲು ಆಗದಂತೆ ಮಾಡಲು ಸುಲಭವಾದ ಆಪ್ಶನ್ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್