ಗೋವಾ ನೂತನ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಅಂಬಾದಾಸ್ ಜೋಶಿ ಪ್ರಮಾಣವಚನ ಸ್ವೀಕರ
Team Udayavani, May 7, 2021, 5:09 PM IST
ಪಣಜಿ: ಮುಂಬಯಿ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಂಬಾದಾಸ್ ಜೋಶಿ ರವರು ಶುಕ್ರವಾರ ಗೋವಾ ರಾಜ್ಯದ ನೂತನ ಲೋಕಾಯುಕ್ತರಾಗಿ ಪ್ರಮಾಣವಚನ ಸ್ವೀಕರಿಸಿದರು. ಗೋವಾ ರಾಜ್ಯಪಾಲ ಭಗತ್ಸಿಂಗ್ ಕೋಶ್ಯಾರಿರವರು ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಉಪಸ್ಥಿತರಿದ್ದರು.
ರಾಜ್ಯದ ಮಾಜಿ ಲೋಕಾಯುಕ್ತ ಎಂ.ಕೆ.ಮಿಶ್ರಾ ರವರು ಸಪ್ಟೆಂಬರ್ 2019 ರಲ್ಲಿ ನಿವೃತ್ತರಾಗಿದ್ದರು. ಕಳೆದ ಕೆಲ ದಿನಗಳ ಹಿಂದಷ್ಟೇ ಲೋಕಾಯುಕ್ತ ಖಾಯ್ದೆಯ ತಿದ್ಧುಪಡಿ ವಿಧೇಯಕಕ್ಕೆ ಸರ್ಕಾರ ಮಂಜೂರಿ ನೀಡಿತ್ತು. ಲೋಕಾಯುಕ್ತ ಖಾಯ್ದೆಯಲ್ಲಿ ಮಹತ್ವದ ತಿದ್ಧುಪಡಿ ಮಾಡಿ ಲೋಕಾಯುಕ್ತರ ಕೆಲ ಅಧಿಕಾರವನ್ನು ಕಡಿಮೆಗೊಳಿಸಲಾಗಿತ್ತು. ಆದರೆ ಕಾಂಗ್ರೇಸ್ ಪಕ್ಷವು ಈ ತಿದ್ಧುಪಡಿ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿತ್ತು.
ಶುಕ್ರವಾರ ಬೆಳಿಗ್ಗೆ ಗೋವಾದ ರಾಜಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆದ ಸಮಾರಂಭದಲ್ಲಿ ಗೋವಾದ ನೂತನ ಲೋಕಾಯುಕ್ತರಾಗಿ ಮುಂಬಯಿ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಂಬಾದಾಸ್ ಜೋಶಿ ಪ್ರಮಾಣವಚನ ಸ್ವೀಕರಿಸಿದರು.