ಗರ್ಭಿಣೀಯರು ಈ ಆಹಾರ ಪದಾರ್ಥಗಳನ್ನು ಸೇವಿಸದೇ ಇದ್ದರೆ ಒಳಿತು

Team Udayavani, Oct 17, 2019, 8:30 PM IST

ಎಲ್ಲಾ ಹೆಣ್ಣು ಮಕ್ಕಳ ಬದುಕಿನ ಮಹತ್ತರವಾದ ಘಟ್ಟ ಗರ್ಭಧಾರಣೆ. ಈ ಸಮಯದಲ್ಲಿ ಅವಳು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು.ಅತ್ಯಂತ ಸೂಕ್ಷ¾ವಾದ ಈ ಅವಧಿಯಲ್ಲಿ ದೇಹದಲ್ಲಿನ ಬದಲಾವಣೆಯೊಂದಿಗೆ ಮಾನಸಿಕವಾಗಿಯೂ ಹಲವು ವ್ಯತ್ಯಾಸಗಳು ಕಂಡುಬರುತ್ತವೆ. ಸದಾ ತಾನು ಜನ್ಮ ನೀಡುವ ಮಗುವಿನ ಕುರಿತಾಗಿ ಜಪಿಸುವ ಅವಳು ತನ್ನ ಬಗ್ಗೆ ಸಾವಿರಾರು ಆಸೆ-ಕನಸುಗಳನ್ನು ಇಟ್ಟುಕೊಂಡಿರುತ್ತಾಳೆ.

ಆ ಕನಸನ್ನು ಹೆಮ್ಮರವಾಗಿ ಬೆಳಸಬೇಕಾದರೆ ದೇಹದ ಪೋಷಣೆಯೊಂದಿಗೆ ಈ ಸಂದರ್ಭದಲ್ಲಿ ಆಕೆ ಸೇವಿಸುವ ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ.

ಗರ್ಭವಸ್ಥೆಯ ಸಮಯದಲ್ಲಿ ಸೇವಿಸಲು ಅನರ್ಹವಾದ ಕೆಲವೊಂದು ಆಹಾರಗಳನ್ನು ಇಲ್ಲಿ ತಿಳಿಸಿದ್ದು, ಈ ಆಹಾರಗಳಿಂದ ದೂರವಿರುವುದು ಉತ್ತಮ.

ಅಲೋವೆರಾ : ಹೆಣ್ಣು ಮಕ್ಕಳ ಮೊಗದ ತ್ವಚ್ಚೆಯನ್ನು ಹೆಚ್ಚಿಸುವ ಶಕ್ತಿ ಇರುವ ಈ ಆಹಾರ ಪದಾರ್ಥ ಗರ್ಭಿಣಿಯರ ಆಹಾರ ಕ್ರಮಗಳಿಂದ ಅಂತರ ಕಾಯ್ದು ಕೊಳ್ಳುವುದು ಉತ್ತಮ. ಗರ್ಭವಾಸ್ಥೆಯಲ್ಲಿ ಇರುವವರು ಅಥವಾ ತಾಯಿಯಾಗಲು ಬಯಸುತ್ತಿರುವವರು ಅಲೋವೆರಾವನ್ನು ಸೇವಿಸುವಿಕೆಯಿಂದ ಕೊಂಚ ದೂರ ಉಳಿಯುವುದರೊಂದಿಗೆ, ಅಲೋವೆರಾ ಮಿಶ್ರಿತ ಪಾನೀಯ ಅಥವಾ ಇದರ ಅಂಶ ಹೊಂದಿರುವ ಆಹಾರ ಸೇವನೆ ಒಳಿತಲ್ಲ. ಇದರ ಸೇವನೆಯಿಂದ ರಕ್ತಸ್ರಾವ ಉಂಟಾಗುವ ಅವಕಾಶ ಇದ್ದು, ಗರ್ಭಪಾತದಂತಹ ಅಪಾಯಕ್ಕೂ ಕಾರಣವಾಗಬಹುದು.

ಪಪ್ಪಾಯ : ತಾಯ್ತನವನ್ನು ಎದುರು ನೋಡುತ್ತಿರುವ ಮಹಿಳೆಯರು ಪಪ್ಪಾಯವನ್ನು ತಿನ್ನುವುದು ಒಳ್ಳೆಯದಲ್ಲ. ಪಪ್ಪಾಯ ಕಾಯಿಯ ಪದಾರ್ಥಗಳನ್ನು ತಿಂದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಣ್ಣಿನಲ್ಲಿರುವ ಕಿಣ್ವ ಕಣಗಳು ಗರ್ಭಾಶಯವನ್ನು ಕುಗ್ಗಿಸುವುದಲ್ಲದೆ, ಗರ್ಭಪಾತವನ್ನು ಉಂಟು ಮಾಡಬಹುದು.

ಅನಾನಸ್‌ : ಗರ್ಭಿಣೀಯರ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಫ‌ಲಗಳಲ್ಲಿ ಅನಾನಸ್‌ ಕೂಡ ಒಂದಾಗಿದ್ದು, ಇದರಲ್ಲಿರುವ ಬೊÅಮಲೆನ್‌ ಎಂಬ ಅಂಶ ಗರ್ಭಾಶಯದ ಸ್ನಾಯುವಿನ ಮೇಲೆ ಪರಿಣಾಮ ಬೀರುತ್ತದೆ.

ಸೋಯಾಸಾಸ್‌: ಬಸರಿ ಮಹಿಳೆಯರು ತೆಗೆದುಕೊಳ್ಳುವ ಆಹಾರದಲ್ಲಿ ಸೋಯಾ ಸಾಸ್‌ ಅಂತಹ ಪದಾರ್ಥಗಳನ್ನು ಬಳಸದಿದ್ದರೆ ಒಳಿತು. ಇದರ ಸೇವೆನೆಯಿಂದ ಗರ್ಭಿಣಿಯರ ರಕ್ತದೊತ್ತಡ ಹೆಚ್ಚಾಗುವುದರೊಂದಿಗೆ ಗರ್ಭಧಾರಣೆ ಮೇಲೆಯೂ ಪರಿಣಾಮ ಬೀರುತ್ತದೆ.

ಹಸಿ ಮೊಟ್ಟೆ : ಗರ್ಭಿಣಿ ಮಹಿಳೆಯರು ಹಸಿ ಮೊಟ್ಟೆ ಮತ್ತು ಮೊಟ್ಟೆಯ ಹಳದಿಯನ್ನು ಸೇವಿಸುವುದರಿಂದ ಗರ್ಭಪಾತವಾಗುವ ಸಾಧ್ಯತೆ ಇದ್ದು, ಮೆಯೊನಿಸ್‌ಗಳ ತಯಾರಿಕೆಯಲ್ಲಿಯೂ ಮೊಟ್ಟೆಯನ್ನು ಬಳಸುವುದರಿಂದ ಇದನ್ನು ಸೇವಿಸುವುದು ಕೂಡ ಅಪಾಯಕಾರಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ