ಇಸ್ರೋ ಅಧ್ಯಕ್ಷ ಶಿವನ್ಗೆ ಅಭಿಮಾನದ ಹೂಮಳೆ
Team Udayavani, Oct 6, 2019, 5:33 AM IST
ಹೊಸದಿಲ್ಲಿ: ಹಿಂದೆ ವಿಜ್ಞಾನಿಗಳು ಎಲ್ಲದರೂ ಕಾಣಿಸಿ ಕೊಂಡರೆ, ಯಾರೂ ಅವರ ಬಳಿ ಹೋಗಿ ಆಟೋಗ್ರಾಫ್ ಕೇಳುತ್ತಿರಲಿಲ್ಲವೇನೋ?! ಈಗ, ವಿಜ್ಞಾನಿಗಳು ಜನರಿಗೆ ಚಿರಪರಿಚಿತರಾಗಿದ್ದಾರೆ. ಆಟೋಗ್ರಾಫ್ ಜಾಗಕ್ಕೆ ಸೆಲ್ಫಿಗಳು ಬಂದಿವೆ.
ಇದಕ್ಕೆ ಉದಾಹಣೆಯೆಂಬಂತೆ, ಇಸ್ರೋ ಅಧ್ಯಕ್ಷ ಕೆ. ಶಿವನ್, ಇಂಡಿಗೋ ಸಂಸ್ಥೆಯ ವಿಮಾನದಲ್ಲಿ ಪ್ರಯಾಣಿಸುವಾಗ ಇಂಥ ದ್ದೊಂದು “ಫ್ಯಾನ್ ಮೊಮೆಂಟ್’ ಘಟನೆ ನಡೆದಿದೆ. ಶಿವನ್ ಅವರು ಕ್ಯಾಬಿನ್ನೊಳಕ್ಕೆ ಕಾಲಿಡುತ್ತಿದ್ದಂತೆಯೇ, ವಿಮಾನದ ಸಿಬಂದಿಯು ಅವರನ್ನು ಗುರುತಿಸಿ, ಅವರ ಕೈ ಕುಲುಕಿಸಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅದೇ ವಿಮಾನದಲ್ಲಿದ್ದ ಪ್ರಯಾಣಿಕರು ಅದರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದಾರೆ. ಇಸ್ರೋದ ಅಧ್ಯಕ್ಷರಾಗಿದ್ದರೂ, ಅಂದು ಶಿವನ್, ಎಕಾನಮಿ ಕ್ಲಾಸ್ನಲ್ಲಿ (ಸಾಮಾನ್ಯ ವರ್ಗ) ಪ್ರಯಾಣಿಸಲು ಆಗಮಿಸಿದ್ದನ್ನು ಹಲವಾರು ಮಂದಿ ಕೊಂಡಾಡಿದ್ದಾರೆ. ಶಿವನ್ ನೇತೃತ್ವದ “ಚಂದ್ರಯಾನ-2′ ಸಾಹಸವನ್ನು ನೆನೆದು ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಚಪ್ಪಾಳೆಯ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್