ಪಂಜಾಬ್ನ ಹಿರಿಯ ನಾಯಕ ಸುನೀಲ್ ಜಾಖಡ್ ಕಾಂಗ್ರೆಸ್ಗೆ ವಿದಾಯ
Team Udayavani, May 14, 2022, 7:56 PM IST
ನವದೆಹಲಿ: ಕಾಂಗ್ರೆಸ್ನಿಂದ ಈಗಾಗಲೇ ಎರಡು ವರ್ಷ ಅಮಾನತುಗೊಂಡಿರುವ ಪಂಜಾಬ್ನ ಹಿರಿಯ ನಾಯಕ ಸುನೀಲ್ ಜಾಖಡ್; ಕಾಂಗ್ರೆಸ್ಗೆ ವಿದಾಯ ಹೇಳಿದ್ದಾರೆ.
ಫೇಸ್ಬುಕ್ನಲ್ಲಿ ಈ ಕುರಿತಂತೆ ತಮ್ಮ ಸೆಲ್ಫಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ಗುಡ್ಲಕ್ ಆ್ಯಂಡ್ ಗುಡ್ಬೈ ಕಾಂಗ್ರೆಸ್ ಎಂದು ಹೇಳಿದ್ದಾರೆ.
“ಈ ಹಿಂದೆ ಪಂಜಾಬ್ ಸಿಎಂ ಆಗಿದ್ದ ಅಮರೀಂದರ್ ಸಿಂಗ್ ಜಾಗದಲ್ಲಿ ಪಂಜಾಬ್ ಮುಖ್ಯಮಂತ್ರಿಯಾಗಿ ಚರಣ್ಜಿತ್ ಸಿಂಗ್ ಛನ್ನಿಯನ್ನು ನೇಮಿಸಿದ್ದಾಗಲೇ ಅವರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲಿಂದಲೇ ಪಕ್ಷದಲ್ಲಿ ಇರುಸು ಮುರುಸು ಶುರುವಾಗಿತ್ತು. ತಾನೀಗ ನೋವಲ್ಲಿದ್ದೇನೆ, ಆದರೂ ಕಾಂಗ್ರೆಸ್ ಬಗ್ಗೆ ಅಯ್ಯೋ ಅನಿಸುತ್ತಿದೆ. ಉದಯಪುರದಲ್ಲಿ ಕಾಂಗ್ರೆಸ್ ಚಿಂತನ ಶಿಬಿರ ಹಮ್ಮಿಕೊಂಡಿದೆ.ಅದರ ಬದಲು “ಚಿಂತೆಯ ಶಿಬಿರ’ ಮಾಡುವುದೊಳ್ಳೆಯದಿತ್ತು’ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಅಗ್ರನಾಯಕಿ ಸೋನಿಯಾ ಗಾಂಧಿ ವಿರುದ್ಧವೂ ಹರಿಹಾಯ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು