ಎ. 1ರಿಂದ ಬಿಎಸ್-6 ವಾಹನ, ಇಂಧನ ಸಿಗಲಿದೆ
Team Udayavani, Jan 22, 2020, 12:38 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಹೊಸದಿಲ್ಲಿ: ಎ. 1ರಿಂದ ಅನ್ವಯವಾಗುವಂತೆ ದೇಶಾದ್ಯಂತ ವಾಹನಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಹೊಂದಿರುವ ಇಂಧನ ಮತ್ತು ವಾಹನಗಳನ್ನು ರಸ್ತೆಗೆ ಇಳಿಸಲು ಸರಕಾರ ಮತ್ತು ಕಂಪೆನಿಗಳು ಸಿದ್ಧವಾಗಿವೆ.
ಸುಪ್ರೀಂಕೋರ್ಟ್ ನೇಮಿಸಿದ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ನವದೆಹಲಿಯಲ್ಲಿ ಮಂಗಳವಾರ ನಡೆಸಿದ ಪರಿಶೀಲನ ಸಭೆಯಲ್ಲಿ ಈ ಅಂಶ ಪ್ರಸ್ತಾವವಾಗಿದೆ.