ಉದ್ಯೋಗಿಗಳಿಗೆ ಸದ್ಯದಲ್ಲೇ ಯೋಗ ಬ್ರೇಕ್‌! ಕೇಂದ್ರ ಆಯುಷ್‌ ಇಲಾಖೆಯ ಹೊಸ ಪರಿಕಲ್ಪನೆ

Team Udayavani, Jan 14, 2020, 7:59 PM IST

– ದಿನದ ಕರ್ತವ್ಯದ ವೇಳೆ ಆಗುವ ಮಾನಸಿಕ ಒತ್ತಡ ನಿವಾರಣೆಗೆ ಹೊಸ ಉಪಾಯ
– ಸೇವೆಯ ಅವಧಿಯಲ್ಲೇ ಐದು ನಿಮಿಷದ ಯೋಗ ಬ್ರೇಕ್‌ ನೀಡಲು ನಿರ್ಧಾರ
– ಐದು ನಿಮಿಷದಲ್ಲಿ ಸುಲಭ ವ್ಯಾಯಾಮಗಳ ಮೂಲಕ ಒತ್ತಡ ನಿವಾರಣೆಗೆ ಕ್ರಮ
– ಸರ್ಕಾರಿ, ಕಾರ್ಪೊರೇಟ್‌ ಕಚೇರಿಗಳಲ್ಲಿ ಯೋಗ ಬ್ರೇಕ್‌ ಜಾರಿಗೆ ಚಿಂತನೆ

ನವದೆಹಲಿ: ದೈನಂದಿನ ಕರ್ತವ್ಯ ನಿರ್ವಹಣೆಯ ವೇಳೆ ಉದ್ಯೋಗಿಗಳು ಅನುಭವಿಸುವ ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯಲು ಅವರಿಗೆ ದಿನದ ಸೇವಾವಧಿಯ ನಡುವೆಯೇ ಐದು ನಿಮಿಷ ಲಘು ವ್ಯಾಯಾಮ ಮಾಡಲು ಅನುಕೂಲ ಕಲ್ಪಿಸುವ ಹೊಸ ಪರಿಕಲ್ಪನೆಯೊಂದನ್ನು ಕೇಂದ್ರ ಆಯುಷ್‌ ಇಲಾಖೆ ಸೋಮವಾರದಿಂದ ಜಾರಿಗೊಳಿಸಿದೆ.

ಇದಕ್ಕೆ “ಯೋಗ ಬ್ರೇಕ್‌’ ಅಥವಾ “ವೈ-ಬ್ರೇಕ್‌’ ಎಂದು ಹೆಸರಿಡಲಾಗಿದ್ದು, ಇದನ್ನು ಸರ್ಕಾರಿ ಕಚೇರಿಗಳು ಹಾಗೂ ಕಾರ್ಪೊರೇಟ್‌ ಕಚೇರಿಗಳಲ್ಲೂ ಜಾರಿಗೊಳಿಸುವ ಬಗ್ಗೆ ಆಲೋಚನೆ ಮಾಡಲಾಗಿದೆ. 5 ನಿಮಿಷದಲ್ಲಿ ಒತ್ತಡ ನಿರ್ಮೂಲನೆಗೆ ಸಹಾಯವಾಗುವ ವ್ಯಾಯಾಮಗಳನ್ನು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆ ಈ ಯೋಗ ಬ್ರೇಕ್‌ನಲ್ಲಿ ಅಳವಡಿಸಿದೆ. “ವೈ-ಬ್ರೇಕ್‌’ನಲ್ಲಿ ಸುಲಭವಾದ ವಿವಿಧ ಆಸನಗಳನ್ನು ಅಭ್ಯಾಸ ಮಾಡಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಸ್ಲೆ„ಡ್‌ ಶೋ, ಬುಕ್‌ಲೆಟ್‌ಗಳ ಮೂಲಕ ಆ ವ್ಯಾಯಾಮಗಳ ಸರಿಯಾದ ಭಂಗಿ ಮತ್ತಿತರ ಮಾಹಿತಿಗಳನ್ನು ನೀಡಲಾಗುತ್ತದೆ.

ಸದ್ಯಕ್ಕೆ ಟಾಟಾ ಕೆಮಿಕಲ್ಸ್‌, ಆ್ಯಕ್ಸಿಸ್‌ ಬ್ಯಾಂಕ್‌, ಅರ್ನ್Õ$r ಆ್ಯಂಡ್‌ ಯಂಗ್‌ ಗ್ಲೋಬಲ್‌ ಕನ್ಸಲ್ಟಿಂಗ್‌ ಸರ್ವೀಸಸ್‌ ಸೇರಿದಂತೆ 15 ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಈ ಯೋಗ ಬ್ರೇಕ್‌ ಅನ್ನು ತಮ್ಮಲ್ಲಿ ಅಳವಡಿಸಿಕೊಂಡಿವೆ ಎಂದು ಆಯುಷ್‌ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ