ಓಲಾ, ಉಬರ್ ದರಕ್ಕೆ ಅಂಕುಶ: ಕೇಂದ್ರ ಸರಕಾರದಿಂದ ಹೊಸ ನಿಯಮಗಳು ಜಾರಿ
Team Udayavani, Nov 28, 2020, 11:49 PM IST
ಹೊಸದಿಲ್ಲಿ: ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಓಲಾ, ಉಬರ್ ಸಂಸ್ಥೆಗಳ ನಿಯಂತ್ರಣಕ್ಕೆ ಕೇಂದ್ರ ಸರಕಾರ ನಿಯಮಾವಳಿಗಳನ್ನು ಪ್ರಕಟಿಸಿದೆ. ಇದರ ಪ್ರಮುಖ ಲಾಭವೇನೆಂದರೆ ಹೆಚ್ಚಿನ ದರಗಳನ್ನು ಅವುಗಳು ವಿಧಿಸುವಂತಿಲ್ಲ.
ಮೂಲ ದರದ ಒಂದೂವರೆ ಪಟ್ಟು ಮಾತ್ರ ವಿಧಿಸಬಹುದಾಗಿದೆ. ಯಾವುದೇ ಪ್ರಯಾಣವನ್ನು ಚಾಲಕ ಅಥವಾ ಪ್ರಯಾಣಿಕ ರದ್ದು ಮಾಡಿದರೆ ಆ ಪ್ರಯಾಣಕ್ಕೆ ವಿಧಿಸಲಾಗುವ ಶೇ.10ರಷ್ಟು ಮೊತ್ತ ನೀಡಬೇಕು. ಆದರೆ ಅದು, 100 ರೂ.ಗಳಿಗಿಂತ ಹೆಚ್ಚಾಗುವಂತೆ ಇಲ್ಲ. ಇದರಿಂದಾಗಿ ವಿನಾ ಕಾರಣ ಪ್ರಯಾಣ ರದ್ದು ಮಾಡುವವರಿಗೆ ಎಚ್ಚರಿಕೆಯ ಗಂಟೆಯಾಗಲಿದೆ. ಮತ್ತೂಂದು ಪ್ರಧಾನ ಅಂಶವೆಂದರೆ ಪೀಕ್ ಅವರ್ನಲ್ಲಿ ಹೆಚ್ಚಿನ ರೀತಿಯಲ್ಲಿ ದರ ವಸೂಲು ಮಾಡುವುದರ ಮೇಲೆ ಕೂಡ ನಿಯಂತ್ರಣ ಹೇರಿದೆ. ಹೀಗಾಗಿ ಮೂಲದ ದರದ ಒಂದೂವರೆ ಪಟ್ಟು ಹೆಚ್ಚು ಮಾತ್ರ ದರ ವಿಧಿಸಲು ಸಾಧ್ಯವಾಗಲಿದೆ.
ಹಂಚಿಕೆಯ ಆಧಾರ (ಪೂಲಿಂಗ್)ದಲ್ಲಿ ಮಹಿಳೆಯರು ಕ್ಯಾಬ್ಗಳಲ್ಲಿ ಪ್ರಯಾಣಿ ಸುವುದಿದ್ದರೆ, ಸಹ ಪ್ರಯಾಣಿಕರು ಮಹಿಳೆ ಯರಾಗಿದ್ದರೆ ಮಾತ್ರ ಅವಕಾಶ ಕಲ್ಪಿಸ ಲಾಗುತ್ತದೆ. ಗಮನಾರ್ಹ ಅಂಶವೆಂದರೆ ಇದೇ ಮೊದಲ ಬಾರಿಗೆ ದೇಶದಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ನಿಯಂತ್ರಿಸಲು “ಮೋಟಾರ್ ವೆಹಿಕಲ್ ಆ್ಯಗ್ರೆಗೇಟರ್ ಗೈಡ್ಲೈನ್ಸ್ 2020′ ಅನ್ವಯ ನಿಯಮಗಳನ್ನು ಜಾರಿಗೊಳಿಸಲಾ ಗುತ್ತಿದೆ. 12 ಗಂಟೆಗಳ ಕಾಲ ಕೆಲಸ ಮಾಡಿದ ಬಳಿಕ ಚಾಲಕರಿಗೆ 10 ಗಂಟೆಗಳ ಕಡ್ಡಾಯ ವಿಶ್ರಾಂತಿ ನೀಡಬೇಕು. ಜತೆಗೆ ಚಾಲಕರಿಗೆ ಒಂದು ಪ್ರಯಾಣದ ಮೊತ್ತ ಶೇ.80ರಷ್ಟು ಮೊತ್ತ ಪಡೆದುಕೊಳ್ಳಲು ಅವಕಾಶವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
MUST WATCH
ಹೊಸ ಸೇರ್ಪಡೆ
Shotgun ಶೂಟಿಂಗ್ ಅರ್ಹತಾ ಸುತ್ತಿನಲ್ಲಿ ಕರಣ್: ವಿವಾದ
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Dublin; ಆಸೀಸ್ ಸರಣಿ ಮುಂದೂಡಿದ ಐರ್ಲೆಂಡ್
T20 Cricket: “ವಿಂಡೀಸ್ ಪರ ಟಿ20 ವಿಶ್ವಕಪ್ ಆಡಲ್ಲ’: ಸುನೀಲ್ ನಾರಾಯಣ್ ಸ್ಪಷ್ಟ ನುಡಿ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು