ಏರ್ಪೋರ್ಟ್ಗಳಲ್ಲಿ ಅಗ್ಗದ ಚಹಾ, ತಿನಿಸು
Team Udayavani, Sep 9, 2018, 6:00 AM IST
ನವದೆಹಲಿ: ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಸ್ವಾಮ್ಯದ ವಿಮಾನ ನಿಲ್ದಾಣಗಳಲ್ಲಿ ಸದ್ಯದಲ್ಲಿಯೇ ಕಡಿಮೆ ಬೆಲೆಯಲ್ಲಿ ಚಹಾ ಮತ್ತು ಕುರುಕಲು ತಿಂಡಿಗಳನ್ನು ಮಾರುವ ಕೌಂಟರ್ಗಳನ್ನು ತೆರೆಯಲಾಗುತ್ತದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ತಿಳಿಸಿದೆ.
ವಿಮಾನ ನಿಲ್ದಾಣಗಳಲ್ಲಿ ಚಹಾ ಮತ್ತು ಕುರುಕಲು ತಿಂಡಿಗಳಿಗೂ ದುಬಾರಿ ಬೆಲೆ ತೆರಬೇಕಾದ ಬಗ್ಗೆ ಹಲವಾರು ಪ್ರಯಾಣಿಕರು ನಿರಂತರವಾಗಿ ದೂರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಲವೆಡೆ ಪ್ರಾಯೋಗಿಕವಾಗಿ ಆರಂಭಿಸಲಾಗಿರುವ ಇಂಥ ಕೆಲ ಕೌಂಟರ್ಗಳಲ್ಲಿ ಸದ್ಯಕ್ಕೆ ಆಯ್ದ ಪಾನೀಯಗಳು ಹಾಗೂ ಬಾಟಲಿಗಳನ್ನು ಮಾರಲಾಗುತ್ತಿದೆ. ಇಂಥ ಪುಟ್ಟ ಕೌಂಟರ್ಗಳನ್ನು ಎಲ್ಲೆಡೆ ಆರಂಭಿಸಲಾಗುತ್ತದೆ ಎಂದು ಪ್ರಾಧಿಕಾರ ಹೇಳಿದೆ.
ವಿಮಾನ ನಿಲ್ದಾಣಗಳಲ್ಲಿನ ಈ ಹಗಲು ದರೋಡೆಯ ಬಗ್ಗೆ ಇದೇ ವರ್ಷ ಮಾರ್ಚ್ನಲ್ಲಿ ಸಂಸತ್ತಿನಲ್ಲಿಯೂ ಪ್ರಸ್ತಾಪವಾಗಿತ್ತು. ಕಾಂಗ್ರೆಸ್ ನಾಯಕ, ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಕೂಡ ಟ್ವಿಟರ್ನಲ್ಲಿ ದುಬಾರಿ ತಿನಿಸುಗಳ ಬಗ್ಗೆ ಕಿಡಿಕಾರಿದ್ದರು.