ಚುನಾವಣೆಗೆ ಸ್ಫರ್ಧಿಸುವ ವೈದ್ಯಾಧಿಕಾರಿ: ರಾಜೀನಾಮೆ ಸ್ವೀಕರಿಸಿದ ಒಡಿಶಾ ಸರಕಾರ
Team Udayavani, Apr 4, 2019, 5:44 PM IST
ಭುವನೇಶ್ವರ : ಸರಸ್ಕಾನಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿರುವ ಡಾ. ಬುಢಾನ್ ಮುರ್ಮು ಅವರು ತಮ್ಮ ಸರಕಾರಿ ಹುದ್ದೆಗೆ ನೀಡಿರುವ ರಾಜೀನಾಮೆಯನ್ನು ಒಡಿಶಾ ಸರಕಾರ ಕೊನೆಗೂ ಇಂದು ಗುರುವಾರ ಸ್ವೀಕರಿಸಿದೆ.
ಒಡಿಶಾದ ಮಯೂರ್‌ಭಂಜ್ ಲೋಕಸಭಾ ವಿಭಾಗಕ್ಕೆ ಸೇರಿರುವ ಸರಸ್ಕಾನಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಡಾ. ಬುಢಾನ್ ಅವರಿಗೆ ಬಿಜೆಪಿ ಟಿಕೇಟ್ ನೀಡಿದೆ.
ಬುಢಾನ್ ಅವರ ರಾಜೀನಾಮೆಯು 2019 ಎಪ್ರಿಲ್ 4ರಿಂದ ಜಾರಿಗೆ ಬರುತ್ತದೆ. ಮಾಧ್ಯಮದೊಂದಿಗೆ ಮಾತನಾಡಿದ ಬುಢಾನ್ ಅವರು, “ಸರಸ್ಕಾನಾ ಜನರಿಗೆ ನಾನು ಓರ್ವ ವೈದ್ಯನಾಗಿ ಸೇವೆ ಸಲ್ಲಿಸಿದ್ದೇನೆ; ಅಂತೆಯೇ ಅವರು ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಹೇಳಿದರು.