ವಾಹನ ಸಂಖ್ಯೆಗೆ ಮೊಬೈಲ್ ಸಂಖ್ಯೆ ಜೋಡಣೆ ಕಡ್ಡಾಯ
Team Udayavani, Dec 9, 2019, 6:15 AM IST
ಹೊಸದಿಲ್ಲಿ: ಎಲ್ಲ ವಾಹನ ಮಾಲಕರೂ ತಮ್ಮ ವಾಹನಗಳ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆಗಳನ್ನು ಜೋಡಿಸುವ ನಿಯಮ ಎ. 1ರಿಂದ ದೇಶವ್ಯಾಪಿ ಕಡ್ಡಾಯವಾಗಲಿದೆ.
ಕೇಂದ್ರ ಸಾರಿಗೆ ಇಲಾಖೆ ನಿರ್ವಹಿ ಸುವ “ವಾಹನ್’ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ತಮ್ಮ ವಾಹನಗಳಿಗೆ ಮೊಬೈಲ್ ಸಂಖ್ಯೆಯನ್ನು ಜೋಡಿಸಬೇಕಿದೆ. ಇದರಿಂದ ವಾಹನ ನೋಂದಣಿಯು ಮತ್ತಷ್ಟು ಪರಿಣಾಮ ಕಾರಿಯಾಗಲಿದ್ದು, ಅನೇಕ ಪ್ರಯೋ ಜನಗಳನ್ನೂ ಮಾಲಕರು ಪಡೆಯಬಹುದಾಗಿದೆ.
ಈ ಹೊಸ ನಿಯಮ ಜಾರಿಗಾಗಿ 1989ರ ಕೇಂದ್ರ ಮೋಟಾರು ವಾಹನಗಳ ಅಧಿನಿಯಮಗಳಲ್ಲಿ ತಿದ್ದುಪಡಿ ತರಲು ಕೇಂದ್ರ ಸಾರಿಗೆ ಇಲಾಖೆ ನಿರ್ಧರಿಸಿದೆ. ಮೊಬೈಲ್ ಸಂಖ್ಯೆ ಜೋಡಣೆ ಕುರಿತಂತೆ ನ. 29ರಂದೇ ಆದೇಶ ಹೊರಡಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿದ ಸಾರಿಗೆ ಇಲಾಖೆ ಅಧಿಕಾರಿ, ಇದರಿಂದ ಮಾಲಕರಿಗೆ ಮುಂದೆ ವಾಹನಗಳ ಮಾಲಕತ್ವ ವರ್ಗಾವಣೆ, ನೋಂದಣಿ ನವೀಕರಣ, ನೋಂದಾವಣಿ ಪ್ರಮಾಣ ಪತ್ರದ ನಕಲು ಪ್ರತಿೆ, ಮಾಲಕರ ವಿಳಾಸ ಬದಲಾವಣೆಗೆ ಅನುಕೂಲವಾಗಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!