ಅಮೆಜಾನ್ ಇಂಡಿಯಾ ರಾಜೀನಾಮೆ: ಕೇಂದ್ರ ಸರ್ಕಾರದಿಂದ ತನಿಖೆ
Team Udayavani, Nov 29, 2022, 7:45 AM IST
ನವದೆಹಲಿ: ಅಮೆಜಾನ್ ಇಂಡಿಯಾ ತನ್ನ ಆಹಾರ ವಿಭಾಗದ ಸೇವೆಯನ್ನು ದೇಶದಲ್ಲಿ ಮುಚ್ಚಲು ನಿರ್ಧರಿಸಿದೆ. ಆ ವಿಭಾಗ ಸೇರಿದಂತೆ 10 ಸಾವಿರ ಮಂದಿಯನ್ನು ವಜಾಗೊಳಿಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇದೇ ವೇಳೆ, ಕಂಪನಿಯಲ್ಲಿ ಸಾಲು ಸಾಲು ರಾಜೀನಾಮೆ ನೀಡುತ್ತಿರುವ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಾರ್ಮಿಕ ಕಾನೂನು ಅಥವಾ ಸೇವಾ ನಿಯಮಗಳ ಉಲ್ಲಂಘನೆ ಆಗಿದೆಯೇ ಎಂಬುದನ್ನು ತಿಳಿಯಲು ವಿಚಾರಣೆ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಅಮೆಜಾನ್ ಇಂಡಿಯಾ ಪ್ರಕಟಿಸಿದ್ದ ಸ್ವಯಂಪ್ರೇರಿತ ಬೇರ್ಪಡುವಿಕೆ ಕಾರ್ಯಕ್ರಮ(ವಿಎಸ್‌ಪಿ)ದ ಕುರಿತು ವಿವರಣೆ ನಿಡುವಂತೆ ಕಾರ್ಮಿಕ ಸಚಿವಾಲಯ ಕಳೆದ ವಾರ ನೋಟಿಸ್ ನೀಡಿತ್ತು. ಅದರ ವಿರುದ್ಧ ತನಿಖೆ ನಡೆಸುವಂತೆ ಐಟಿ ಕಂಪನಿಗಳ ಉದ್ಯೋಗಿಗಳ ಒಕ್ಕೂಟ ಒತ್ತಾಯಿಸಿತ್ತು.