ಮಹಾ ಚಾಣಕ್ಯ: ಶರದ್‌ ಪವಾರ್‌

Team Udayavani, Nov 28, 2019, 11:30 AM IST

ಮುಂಬಯಿ: ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಶರದ್‌ ಪವಾರ್‌ ಅವರು ತಮ್ಮ ಅನಿರೀಕ್ಷಿತ ನಡೆಗಳಿಗಾಗಿಯೇ ರಾಜಕೀಯ ರಂಗದಲ್ಲಿ ಹೆಚ್ಚು ಖ್ಯಾತರು.

1958ರಲ್ಲಿ ರಾಜಕಾರಣಕ್ಕೆ ಪ್ರವೇಶಿಸಿದ್ದರು. 1967ರಲ್ಲಿ ಕಾಂಗ್ರೆಸ್‌ನ ಸಕ್ರಿಯ ಸದಸ್ಯರಾಗಿ ಹಲವು ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿದ ಪವಾರ್‌ ರಾಜ್ಯ ಮತ್ತುಸಂಸತ್ತಿನ ಚುನಾವಣೆಗಳಲ್ಲಿ 14 ಬಾರಿ ಅಜೇಯರಾಗಿದ್ದಾರೆ. ಓರ್ವ ಜನಸಾಮಾನ್ಯನಿಂದ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ವ್ಯಕ್ತಿಯಾಗುವ ತನಕ ಪವಾರ್‌ ತಮ್ಮ ರಾಜಕೀಯ ವೃತ್ತಿಜೀವನದಲ್ಲಿ ಹಲವು ಬಗೆಯಏರಿಳಿತಗಳನ್ನು ಎದುರಿಸಿದ್ದಾರೆ. 1967ರ ಫೆ. 22ರಂದು ಅವರು ಪ್ರಥಮ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಇಲ್ಲಿಯವರೆಗೂ ವಿಧಾನಸಭೆ ಮತ್ತುಪಾರ್ಲಿಮೆಂಟ್‌ನಲ್ಲಿ ನಿರಂತರ 52 ವರ್ಷಗಳ ಯಶಸ್ವಿ ರಾಜಕಾರಣ ಮಾಡಿದವರು. ಪ್ರಸ್ತುತ ಶಿವಸೇನೆ-ಎನ್‌ ಸಿಪಿ-ಕಾಂಗ್ರೆಸ್‌ ಮತ್ತು ಇತರ ಮಿತ್ರಪಕ್ಷಗಳನ್ನು ಒಳಗೊಂಡ ಮಹಾ ವಿಕಾಸ ಆಘಾಡಿಯ ಪ್ರಮುಖ ಸೂತ್ರಧಾರ.

ತನ್ನ ಸ್ನೇಹಿತರು ಮತ್ತು ಪ್ರತಿಸ್ಪರ್ಧಿಗಳ ನಡುವೆ ಮರಾಠ ಸ್ಟ್ರಾಂಗ್‌ಮ್ಯಾನ್‌ (ಮರಾಠ ಶಕ್ತಿಶಾಲಿ ಮನುಷ್ಯ) ಎಂಬ ಹೆಸರಿನಿಂದ ಗುರುತಿಸಲ್ಪಡುವ ಪವಾರ್‌ 1960ರ ದಶಕದಲ್ಲಿ ಪಶ್ಚಿಮ ಮಹಾರಾಷ್ಟ್ರದ ಬಾರಾಮತಿಯಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶಿಸಿದರು. ವೈ. ಬಿ. ಚವಾಣ್‌ ಅವರ ಮಾರ್ಗದರ್ಶನದಲ್ಲಿ ಬೆಳೆದವರು. 1991ರಲ್ಲಿ ನರಸಿಂಹರಾವ್‌ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದರು. ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ 1993ರಲ್ಲಿ ಮುಂಬಯಿ ಸರಣಿ ಬಾಂಬ್‌ ದಾಳಿ ಸಂಭವಿಸಿತ್ತು. ವಿದೇಶಿ ಮೂಲ ವಿಷಯ ಸಂಬಂಧ 1999ರಲ್ಲಿ ಸೋನಿಯಾ ಗಾಂಧಿ ಅವರಿಂದ ಬೇರೆಯಾಗಿ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ ಸ್ಥಾಪಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ