“ವರನಿಗೆ ಸಂತಾನಶಕ್ತಿ ಹರಣ ಮಾಡಿಸಿದಂತಿದೆ ನನ್ನ ಸ್ಥಿತಿ’
Team Udayavani, Apr 14, 2022, 10:00 PM IST
ನವದೆಹಲಿ: ಹೊಸದಾಗಿ ಮದುವೆಯಾಗಿರುವ ವರನಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿದಂತೆ ನನ್ನನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಳ್ಳುತ್ತಿದೆ ಎಂದು ಗುಜರಾತ್‌ನ ಪಾಟಿದಾರ್ ಸಮುದಾಯದ ಪ್ರಬಲ ನಾಯಕ ಹಾಗೂ ಗುಜರಾತ್ ಕಾಂಗ್ರೆಸ್‌ನ ಯುವ ನೇತಾರ ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ.
“ಗುಜರಾತ್‌ನಲ್ಲಿ ಇದೇ ವರ್ಷ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ನೇರ ಸಮರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯ ಸಿದ್ಧತೆಗಳನ್ನು ಸರಿಯಾಗಿ ಮಾಡುತ್ತಿಲ್ಲ” ಎಂದು ಹೇಳಿರುವ ಅವರು, “ನನ್ನಲ್ಲಿರುವ ಚುನಾವಣಾ ತಂತ್ರಗಾರಿಕೆಗಳನ್ನು ಸರಿಯಾಗಿ ಪಕ್ಷ ಬಳಸಿಕೊಳ್ಳುತ್ತಿಲ್ಲ. ಪಕ್ಷದ ಸಭೆಗಳಿಗೂ ನನ್ನನ್ನು ಆಹ್ವಾನಿಸುತ್ತಿಲ್ಲ. ನನ್ನನ್ನು ಸಂಪರ್ಕಿಸದೇ ಪಕ್ಷವು ಕೆಲವು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಗುಜರಾತ್ ಕಾಂಗ್ರೆಸ್ ಮಾಡುತ್ತಿರುವ ಈ ತಪ್ಪನ್ನು ಕಾಂಗ್ರೆಸ್ ಹೈಕಮಾಂಡ್ ಮಾಡದಿರಲಿ ಎಂದು ಅವರು ಕೋರಿದ್ದಾರೆ.