GST ದಾಖಲೆ ಮಾಸಿಕ ತೆರಿಗೆ ಸಂಗ್ರಹ
Team Udayavani, May 2, 2018, 5:05 AM IST
ಹೊಸದಿಲ್ಲಿ: ಜಿ.ಎಸ್.ಟಿ. ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಮಾಸಿಕ ತೆರಿಗೆ ಸಂಗ್ರಹ 1.03 ಲಕ್ಷ ಕೋಟಿ ರೂ. ತಲುಪುವ ಮೂಲಕ ದಾಖಲೆ ಬರೆದಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಗಳವಾರ ಈ ಮಾಹಿತಿ ನೀಡಿದ್ದು, ಇ-ವೇ ಬಿಲ್ ಮತ್ತು ಸುಧಾರಿತ ಜಿಎಸ್ಟಿ ವ್ಯವಸ್ಥೆ ಅನುಷ್ಠಾನಕ್ಕೆ ಬಂದ ಬಳಿಕ ತೆರಿಗೆ ಸಂಗ್ರಹಣೆಯಲ್ಲಿ ಸುಧಾರಣೆಯಾಗಿದೆ ಎಂದಿದ್ದಾರೆ.
ಎಪ್ರಿಲ್ ತಿಂಗಳಲ್ಲಿ 1,03,458 ಕೋಟಿ ರೂ. ಜಿ.ಎಸ್.ಟಿ. ಸಂಗ್ರಹಿಸಲಾಗಿದ್ದು, ಇದೊಂದು ಐತಿಹಾಸಿಕ ಬೆಳವಣಿಗೆ ಎಂದಿದ್ದಾರೆ ಜೇಟ್ಲಿ. ಈ ಪೈಕಿ ಎಸ್.ಜಿಎಸ್.ಟಿ. 25,704 ಕೋಟಿ ರೂ., ಸಿ.ಜಿ.ಎಸ್.ಟಿ. 18,652 ಕೋಟಿ ರೂ. ಮತ್ತು ಐ.ಜಿ.ಎಸ್.ಟಿ. 50,548 ಕೋಟಿ ರೂ. ಎಂದು ಅವರು ತಿಳಿಸಿದ್ದಾರೆ. 2017-18ನೇ ವರ್ಷದಲ್ಲಿ ಒಟ್ಟಾರೆ ಹೊಸ ತೆರಿಗೆ ಸಂಗ್ರಹ 7.41 ಲಕ್ಷ ಕೋಟಿ ರೂ. ಆಗಿದೆ. ಮಾರ್ಚ್ನಲ್ಲಿ 89,264 ಕೋ. ರೂ. ಜಮೆಯಾಗಿದೆ ಎಂದಿದ್ದಾರೆ ಜೇಟ್ಲಿ.
ಜಿ.ಎಸ್.ಟಿ.ಆರ್. 3ಬಿ ಸಲ್ಲಿಕೆ ಸಂಬಂಧಿಸಿದಂತೆ ಎ.30ರವರೆಗಿನ ಅವಧಿಯಲ್ಲಿ ಶೇ. 69.5ರಷ್ಟು ರಿಟರ್ನ್ಸ್
ಸಲ್ಲಿಕೆ ಮಾಡಲಾಗಿದೆ. 87.12 ಲಕ್ಷ ಮಂದಿಯ ಪೈಕಿ 60.47 ಲಕ್ಷ ಮಂದಿ ಮಾರ್ಚ್ ಅಂತ್ಯಕ್ಕೆ ತೆರಿಗೆ ಸಲ್ಲಿಕೆ ಮಾಡಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
– ಇದೇ ಮೊದಲ ಬಾರಿ 1.03 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ
– ಎಪ್ರಿಲ್ ತಿಂಗಳ ತೆರಿಗೆಯ ಮಾಹಿತಿ ನೀಡಿದ ಸಚಿವ ಜೇಟ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು