ಗುಜರಾತ್‌ಗೆ ಅಪ್ಪಳಿಸದ ಚಂಡಮಾರುತ

ರಾತೋರಾತ್ರಿ ಪಥ ಬದಲಿಸಿದ "ವಾಯು'

Team Udayavani, Jun 14, 2019, 5:21 AM IST

gujarath

ಅಹಮದಾಬಾದ್‌: ಗುರುವಾರ ಮಧ್ಯಾಹ್ನದ ವೇಳೆಗೆ ಗುಜರಾತ್‌ ಕರಾವಳಿಗೆ ಅಪ್ಪಳಿಸುತ್ತದೆ ಎಂದು ಹೇಳಲಾಗಿದ್ದ “ವಾಯು’ ಚಂಡಮಾರುತವು ಬುಧವಾರ ರಾತೋರಾತ್ರಿ ಪಥ ಬದಲಿಸಿದ್ದು, ಗುಜ ರಾತ್‌ನ ಜನತೆ ನಿರಾಳರಾಗುವಂತೆ ಮಾಡಿದೆ.

ಚಂಡಮಾರುತವು ಗುಜರಾತ್‌ ಕರಾವಳಿಗೆ ಅಪ್ಪಳಿಸದೇ, ಸೌರಾಷ್ಟ್ರ ಕರಾವಳಿ ಯುದ್ದಕ್ಕೂ ಸಮಾನಾಂತರವಾಗಿ ಸಾಗಲಿದೆ. ಅದು ಸ್ವಲ್ಪಮಟ್ಟಿಗೆ ಪಶ್ಚಿಮದ ಕಡೆ ಮುಖ ಮಾಡಿದ ಕಾರಣ, ನೇರವಾಗಿ ಗುಜರಾತ್‌ ಕರಾವಳಿಗೆ ಅಪ್ಪಳಿಸಲಿಲ್ಲ. ಆದರೆ, ಕರಾವಳಿಯ ಸಮೀಪದಲ್ಲೇ ಇದು ಹಾದು ಹೋಗುವ ಕಾರಣ ಗುಜರಾತ್‌ನ ಮೇಲೆ ಪರಿಣಾಮ ತಪ್ಪಿದ್ದಲ್ಲ. “ವಾಯು’ ಎಫೆಕ್ಟ್ ಎಂಬಂತೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಬಿರುಗಾಳಿಯಿಂದ ಕೂಡಿದ ಧಾರಾ ಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಹೈಅಲರ್ಟ್‌ ಮುಂದುವರಿಕೆ: ಚಂಡಮಾರುತವು ಗುಜರಾತ್‌ಗೆ ಅಪ್ಪಳಿಸದಿದ್ದರೂ, ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ. ಭಾಗಶಃ ಚಂಡಮಾರುತವು ಕರಾವಳಿಗೆ ತಾಗಿಕೊಂಡೇ ಸಾಗುವ ಕಾರಣ, ಹಾನಿಯ ಪ್ರಮಾಣ ತಗ್ಗದು. ಗಿರ್‌-ಸೋಮನಾಥ, ಜುನಾಗಡ, ಪೋರಬಂದರ್‌, ದೇವ ಭೂಮಿ- ದ್ವಾರಕಾ ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಡಿಯು ಚಂಡಮಾರುತದ ಪ್ರಭಾವಕ್ಕೆ ಸಿಲುಕಲಿವೆ. ಅಲ್ಲದೆ, ಈ ಭಾಗಗಳಲ್ಲಿ ಗಂಟೆಗೆ 155- 165 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ, ಶುಕ್ರವಾರದವರೆಗೂ ಹೈ ಅಲರ್ಟ್‌ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಗುಜರಾತ್‌ನ 560 ಗ್ರಾಮಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಸಮುದ್ರಕ್ಕಿಳಿಯಲು ಮುಂದಾಗಿದ್ದ 8 ಸಾವಿರ ಮೀನುಗಾರರು ಕೊನೇ ಕ್ಷಣದಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ರಾಜ್ಯ ಸರ್ಕಾರಿವು ಚಂಡಮಾರುತದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ 3 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ.

86 ರೈಲುಗಳ ಸಂಚಾರ ರದ್ದು
ವಾಯು ಚಂಡಮಾರುತದ ಹಿನ್ನೆಲೆ ಯಲ್ಲಿ ಪಶ್ಚಿಮ ರೈಲ್ವೇ ವಲಯವು ಗುರುವಾರ ಒಟ್ಟು 86 ರೈಲುಗಳ ಸಂಚಾರ ರದ್ದುಗೊಳಿಸಿತ್ತು. ವಾಯು ಪಥ ಬದಲಿಸಿದ್ದರೂ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾ ಯಿತು ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

ತಾಲೂಕಿನಲ್ಲಿ ಉತ್ತಮ ಮಳೆ : ಹರ್ಷಗೊಂಡ ರೈತಾಪಿ ಜನ

ತಾಲೂಕಿನಲ್ಲಿ ಉತ್ತಮ ಮಳೆ : ಹರ್ಷಗೊಂಡ ರೈತಾಪಿ ಜನ

IPL 2022: ಮಹತ್ವದ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ

IPL 2022: ಮಹತ್ವದ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಮತ್ತೆ 124 ಸೋಂಕು ಪ್ರಕರಣ ಪತ್ತೆ

ಮತ್ತೆ 124 ಸೋಂಕು ಪ್ರಕರಣ ಪತ್ತೆ

ಕರಾವಳಿಯಲ್ಲಿ ಬಿರುಸಿನ ಮಳೆ ; ಮೇ 20ರಂದು ಆರೆಂಜ್‌ ಅಲರ್ಟ್‌

ಕರಾವಳಿಯಲ್ಲಿ ಬಿರುಸಿನ ಮಳೆ ; ಮೇ 20 ಕ್ಕೆ ಆರೆಂಜ್‌ ಅಲರ್ಟ್‌: ಹವಾಮಾನ ಇಲಾಖೆಯ ಮುನ್ಸೂಚನೆ

Untitled-1

ಭಾರೀ ಮಳೆ: ಕೇರಳದ 12 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರ ಬರೆದು ನಾಪತ್ತೆಯಾಗಿದ್ದ ಎಂಜಿನಿಯರ್‌ ಪತ್ತೆ!

ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರ ಬರೆದು ನಾಪತ್ತೆಯಾಗಿದ್ದ ಎಂಜಿನಿಯರ್‌ ಪತ್ತೆ!



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಭಾರೀ ಮಳೆ: ಕೇರಳದ 12 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ಎಲ್‌ಪಿಜಿ ಸಿಲಿಂಡರ್‌ ದರ 3.50 ರೂ. ಏರಿಕೆ

ಎಲ್‌ಪಿಜಿ ಸಿಲಿಂಡರ್‌ ದರ 3.50 ರೂ. ಏರಿಕೆ

1-sadsad

ಪ್ರವಾಹ ಸಮೀಕ್ಷೆ ವೇಳೆ ಅಸ್ಸಾಂ ಶಾಸಕನ ಬಾಲಿಶತನಕ್ಕೆ ಆಕ್ರೋಶ : ವಿಡಿಯೋ

1-sdsa

ಜೈಲಿಗೆ ಹೋಗುವುದು ತಿಳಿದೇ ಹಾರ್ದಿಕ್ ಪಟೇಲ್ ಪಕ್ಷ ಬಿಟ್ಟಿದ್ದಾರೆ : ಜಗದೀಶ್ ಠಾಕೂರ್

ಜ್ಞಾನವಾಪಿ ಮಸೀದಿ ವಿವಾದ: ಕೋರ್ಟ್ ಗೆ ಸಲ್ಲಿಸಿದ ಸಮೀಕ್ಷೆಯ ವರದಿಯಲ್ಲೇನಿದೆ?

ಜ್ಞಾನವಾಪಿ ಮಸೀದಿ ವಿವಾದ: ಕೋರ್ಟ್ ಗೆ ಸಲ್ಲಿಸಿದ ಸಮೀಕ್ಷೆಯ ವರದಿಯಲ್ಲೇನಿದೆ?

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

ಮತ್ತೆ “ಎ’ ಗ್ರೇಡ್‌ಗೇರಿದ ದ.ಕ., ಸಮತೋಲನ ಕಾಯ್ದುಕೊಂಡ ಉಡುಪಿ

ಮತ್ತೆ “ಎ’ ಗ್ರೇಡ್‌ಗೇರಿದ ದಕ್ಷಿಣ ಕನ್ನಡ, ಸಮತೋಲನ ಕಾಯ್ದುಕೊಂಡ ಉಡುಪಿ

ತಾಲೂಕಿನಲ್ಲಿ ಉತ್ತಮ ಮಳೆ : ಹರ್ಷಗೊಂಡ ರೈತಾಪಿ ಜನ

ತಾಲೂಕಿನಲ್ಲಿ ಉತ್ತಮ ಮಳೆ : ಹರ್ಷಗೊಂಡ ರೈತಾಪಿ ಜನ

IPL 2022: ಮಹತ್ವದ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ

IPL 2022: ಮಹತ್ವದ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಭೋವಿ ಅಭಿವೃದ್ಧಿ ನಿಗಮದ ಎಂಡಿ ಮೇಲೆ ಎಸಿಬಿ ದಾಳಿ

ಭೋವಿ ಅಭಿವೃದ್ಧಿ ನಿಗಮದ ಎಂಡಿ ಮೇಲೆ ಎಸಿಬಿ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.