ಸೂರತ್ ಕಟ್ಟಡದಲ್ಲಿ ಬೆಂಕಿ: ಕೋಚಿಂಗ್ ಕ್ಲಾಸ್ನ 13 ವಿದ್ಯಾರ್ಥಿಗಳ ದಾರುಣ ಸಾವು
Team Udayavani, May 24, 2019, 7:15 PM IST
ಸೂರತ್ : ಇಲ್ಲಿನ ವಾಣಿಜ್ಯ ಸಂಕೀರ್ಣದ ಮೂರನೇ ಮತ್ತು ನಾಲ್ಕನೇ ಮಹಡಿಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಕೋಚಿಂಗ್ ಕ್ಲಾಸ್ ನ ಕನಿಷ್ಠ 15 ವಿದ್ಯಾರ್ಥಿಗಳು ಮೃತಪಟ್ಟರು.
ಈ ದಾರಣ ಘಟನೆ ಇಂದು ಶುಕ್ರವಾರ ಮಧ್ಯಾಹ್ನ ಸಂಭವಿಸಿತು. ತಕ್ಷಶಿಲಾ ವಾಣಿಜ್ಯ ಸಂಕೀರ್ಣದ 3 ಮತ್ತು 4ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೋಚಿಂಗ್ ಕ್ಲಾಸ್ ನ ವಿದ್ಯಾರ್ಥಿಗಳು ಕಟ್ಟಡದಿಂದ ಕೆಳಗೆ ಹಾರಿ ಜೀವ ಉಳಿಸಿಕೊಳ್ಳಲು ಯತ್ನಿಸಿದರು ಎಂದು ಗುಜರಾತ್ ಡಿಸಿಎಂ ನಿತಿನ್ ಪಟೇಲ್ ತಿಳಿಸಿದರು.
ಬೆಂಕಿ ದುರಂತ ಸಂಭವಿಸಿದೊಡನೆಯೇ 19 ಅಗ್ನಿಶಾಮಕಗಳು ಸ್ಥಳಕ್ಕೆ ಧಾವಿಸಿ ಬಂದವು. ಬೆಂಕಿಯನ್ನು ನಂದಿಸಲು ಎರಡು ಹೈಡ್ರೋಲಿಕ್ ವೇದಿಕೆಗಳನ್ನು ಬಳಸಲಾಯಿತು.
ಕಟ್ಟಡದಲ್ಲಿ ವಾಸವಾಗಿದ್ದವರನ್ನು ಮತ್ತು ಕೋಚಿಂಗ್ ಕ್ಲಾಸ್ ವಿದ್ಯಾರ್ಥಿಗಳನ್ನು ಪಾರು ಮಾಡಲು ಸ್ಥಳೀಯರು ನೆರವಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ