ಅಂಧ ವಿದ್ಯಾರ್ಥಿನಿ ಮೇಲೆ ಇಬ್ಬರು ಅಂಧ ಶಿಕ್ಷಕರಿಂದ ನಾಲ್ಕು ತಿಂಗಳ ಕಾಲ ಅತ್ಯಾಚಾರ

Team Udayavani, Nov 7, 2019, 4:56 PM IST

ಗುಜರಾತ್(ಪಾಲಾನ್ ಪುರ್):15 ವರ್ಷದ ಅಂಧ ವಿದ್ಯಾರ್ಥಿನಿ ಮೇಲೆ ಇಬ್ಬರು ಅಂಧ ಶಿಕ್ಷಕರು ಸುಮಾರು ನಾಲ್ಕು ತಿಂಗಳ ಕಾಲ ಅತ್ಯಾಚಾರ ಎಸಗಿರುವ ಘಟನೆ ಅಂಬಾಜಿ ನಗರದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

ಖಾಸಗಿ ಟ್ರಸ್ಟ್ ನಡೆಸುತ್ತಿರುವ ಶಾಲೆಯ 62 ವರ್ಷದ ಶಿಕ್ಷಕ ಸೇರಿದಂತೆ ಇಬ್ಬರು ಅಂಧ ಶಿಕ್ಷಕರು ನಡೆಸಿರುವ ಅತ್ಯಾಚಾರದ ಬಗ್ಗೆ ಕಳೆದ ತಿಂಗಳು ದೀಪಾವಳಿ ರಜೆಗೆ ಊರಿಗೆ ಹೋದಾಗ ತನನ ಚಿಕ್ಕಮ್ಮನ ಬಳಿ ವಿಷಯ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿರುವುದಾಗಿ ವರದಿ ವಿವರಿಸಿದೆ.

8ನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದಿದ್ದ ಅಂಧ ಬಾಲಕಿಯನ್ನು ಸಂಗೀತ ಶಾಲೆಗೆ ಸೇರಿಸಿದ್ದರು. ಈ ಶಾಲೆ ವಿಕಲಚೇತನದ ಪುನರ್ ವಸತಿ ಕೇಂದ್ರದ ಒಂದು ಭಾಗವೂ ಆಗಿತ್ತು. ಅಂಧ ಬಾಲಕಿ ಶಾಲೆಯ ಹಾಸ್ಟೆಲ್ ನಲ್ಲಿ ಉಳಿಯುತ್ತಿದ್ದಳು ಎಂದು ವರದಿ ತಿಳಿಸಿದೆ.

ಬಾಲಕಿಯ ಚಿಕ್ಕಮ್ಮ ನವೆಂಬರ್ 4ರಂದು ನೀಡಿರುವ ದೂರಿನ ಪ್ರಕಾರ, ಎರಡು ತಿಂಗಳ ಹಿಂದೆ ಮೊದಲ ಬಾರಿಗೆ ಜಯಂತಿ ಥಾಕೋರ್ ಸಂಗೀತ ಕಚೇರಿಯ ಕೋಣೆಯಲ್ಲಿಯೇ ಸುಮಾರು ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದ. ನಂತರ ಚಮನ ಥಾಕೋರ್ ಅತ್ಯಾಚಾರ ನಡೆಸಿದ್ದ ಎಂದು ತಿಳಿಸಲಾಗಿದೆ.

ಹೀಗೆ ಇಬ್ಬರೂ ಅಂಧ ಶಿಕ್ಷಕರು ನಾಲ್ಕು ತಿಂಗಳ ಕಾಲ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ವಿಷಯವನ್ನು ಶಾಲೆಯ ಇತರ ಶಿಕ್ಷಕರಿಗೆ ತಿಳಿಸಿದ ಮೇಲೆ ಲೈಂಗಿಕ ದೌರ್ಜನ್ಯ ನಿಲ್ಲಿಸಿರುವುದಾಗಿ ದೂರಿನಲ್ಲಿ ವಿವರಿಸಿದೆ.

ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿರುವ ಅಂಬಾಜಿ ಪೊಲೀಸ್ ಇನ್ಸ್ ಪೆಕ್ಟರ್ ಜೆಬಿ ಅಗರ್ವಾಲ್, ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಪರಿಸರ ಮಾಲಿನ್ಯವು ದೇಶವನ್ನು ಕಾಡುತ್ತಿರುವ ಜಠಿಲವಾದ ಸಮಸ್ಯೆ. ಸಾರಿಗೆ, ಸಂಚಾರದಲ್ಲಿ ಕ್ರಾಂತಿಯಿಂದಾಗಿ ಇಂದು ನಗರದಲ್ಲಿ ವಾಹನಗಳ ಸಂಖ್ಯೆಯೂ ದಿನದಿಂದ ದಿನಕ್ಕೆ...

  • ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ…' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...

  • "ಬಲೆ ಬೆಳೆ' ಎಂದರೆ ಮುಖ್ಯಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸುವುದು. ಬಲೆ ಬೆಳೆಯಾಗಿ ಕೆಲವಾರು ಬೆಳೆಗಳನ್ನು ಬೆಳೆಯುತ್ತಾರೆ. ಈ ಎಲ್ಲ ಬೆಳೆಯನ್ನೂ ಒಟ್ಟಿಗೆ ಬೆಳೆಯುವ...

  • ಆ್ಯಂಡ್ರೋಕ್ಲಿಫ್ ಎಂಬ ರೈತನಿದ್ದ. ಅವನು ಶ್ರಮಪಟ್ಟು ದುಡಿದು ಬಂಜರು ಭೂಮಿಯಲ್ಲಿ ಕೃಷಿ ಮಾಡಿದ್ದ. ಹಲವಾರು ಹಣ್ಣುಗಳ ಮರಗಳನ್ನು ಬೆಳೆಸಿ ಕೈತುಂಬ ಫ‌ಸಲು ಕೊಯ್ಯುತ್ತಿದ್ದ....

  • ಆಕಾಶ ವೀಕ್ಷಕರಿಗೆ, ಪ್ರಕೃತಿಪ್ರಿಯರಿಗೆ ಸಂತಸದ ಸುದ್ದಿ. ಇದೇ ಡಿಸೆಂಬರ್‌ 26 ರಂದು ಬಲು ಅಪರೂಪದ ಸೂರ್ಯ ಗ್ರಹಣ! ಇದು ಕಂಕಣ ಸೂರ್ಯಗ್ರಹಣ. ದಕ್ಷಿಣಭಾರತದವರಿಗೆ...