ಬಿಜೆಪಿ ಸೋಲಿಸಲು ನಾವೆಲ್ಲಾ ಒಗ್ಗಟ್ಟಾಗಬೇಕಿದೆ !: ಓವೈಸಿ 

Team Udayavani, Dec 18, 2017, 3:19 PM IST

ಹೈದ್ರಾಬಾದ್‌ : ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಖಚಿತವಾಗುತ್ತಿದ್ದಂತೆ ಮೋದಿಯನ್ನು ಸೋಲಿಸಲು ನಾವೆಲ್ಲಾ  ಒಂದಾಗಬೇಕು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಒವೈಸಿ  ಕರೆ ನೀಡಿದ್ದಾರೆ. 

ಸೋಮವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಓವೈಸಿ ‘ಮುಸ್ಲಿಮರನ್ನು ಬದಿಗೆ ಸರಿಸುವ ಯತ್ನ ಮುಂದುವರಿದಿರುವುದು ಫ‌ಲಿತಾಂಶದ ಮೂಲಕ ಕಂಡು ಬಂದಿದೆ’ ಎಂದರು.

‘ಮೋದಿ ಮತ್ತು ರಾಹುಲ್‌ ಗಾಂಧಿ ಅವರು  ಒಂದು ದೇವಾಲಯದಿಂದ ಇನ್ನೊಂದು ದೇವಾಲಯಕ್ಕೆ ಸುತ್ತಿದರು.  ನೀವು ಬಿಜೆಪಿಯನ್ನು ಸೋಲಿಸಲು ಇನ್ನೊಂದು ಬಿಜೆಪಿಯಾಗಲು ಯತ್ನಿಸಬೇಡಿ’ ಎಂದು ರಾಹುಲ್‌ಗೆ ಸಲಹೆ ನೀಡಿದರು. 

‘ಈ ಬಾರಿ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಒಳ್ಳೆಯ ಅವಕಾಶವಿತ್ತು. ಅದನ್ನು ಹಾಳು ಮಾಡಿಕೊಂಡಿತು’ ಎಂದರು.

‘ಈಗ ಬಿಜೆಪಿ ಯಂತ್ರದಂತೆ ಕೆಲಸ ಮಾಡುತ್ತಿದೆ. ಅಖೀಲೇಶ್‌ ಆಗಲಿ, ಮಮತಾ ಬ್ಯಾನರ್ಜಿ ಆಗಲಿ ಇಲ್ಲಾ ನಾನಾಗಲಿ, ಯಾರೇ ಆಗಲಿ ಪ್ರತ್ಯೇಕವಾಗಿ  ಮೋದಿಯನ್ನು ಸೋಲಿಸಲು ಸಾಧ್ಯವಿಲ್ಲ. ನಾವೆಲ್ಲಾ ಒಟ್ಟಾಗಿ ಮೋದಿಗೆ ಸೋಲುಣಿಸಬೇಕಿದೆ’ ಎಂದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ