ಭಾರತೀಯರಿಗೆ ಗಲ್ಫ್ ಕೆಂಪುಹಾಸು

Team Udayavani, Sep 30, 2018, 6:00 AM IST

ನವ ದೆಹಲಿ: ದುಬೈ, ಒಮನ್‌, ಬಹರೈನ್‌ನಂಥ ಗಲ್ಫ್ ರಾಷ್ಟ್ರಗಳು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಭಾರತೀಯರಿಗೆ ಕೆಂಪುಹಾಸು ಹಾಕತೊಡಗಿದೆ. ರೋಡ್‌ಶೋ, ಮಾರ್ಕೆಟಿಂಗ್‌ ತಂತ್ರಗಳು ಹಾಗೂ ನಿಯಮಗಳ ಸಡಿಲಿಕೆ ಮೂಲಕ ಹೆಚ್ಚು ಹೆಚ್ಚು ಭಾರತೀಯ ಪ್ರವಾಸಿಗರನ್ನು ತಮ್ಮ ದೇಶಗಳತ್ತ ಸೆಳೆದುಕೊಳ್ಳುವುದು ಗಲ್ಫ್ ರಾಷ್ಟ್ರಗಳ ಉದ್ದೇಶವಾಗಿದೆ.

ಪ್ರಸಕ್ತ ವರ್ಷದ ಮೊದಲ 7 ತಿಂಗಳಲ್ಲೇ 12 ಲಕ್ಷ ಭಾರತೀಯರು ದುಬೈಗೆ ಭೇಟಿ ನೀಡಿದ್ದಾರೆ. ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತೇಜಿಸುವ ಸಲುವಾಗಿ ಈ ದೇಶಗಳು ಹತ್ತು ಹಲವು ಕೊಡುಗೆಗಳನ್ನು ಘೋಷಿಸತೊಡಗಿವೆ. ಗ್ರೀನ್‌ ಕಾರ್ಡ್‌ ಹೊಂದಿರುವ ಭಾರತೀಯರಿಗೆ ವೀಸಾ ಆನ್‌ ಅರೈವಲ್‌ ಸೌಲಭ್ಯವನ್ನು ದುಬೈ ಈಗಾಗಲೇ ಕಲ್ಪಿಸಿದೆ.  ಬೆಂಗಳೂರು ಸೇರಿದಂತೆ 11 ನಗರಗಳಲ್ಲಿ ರೋಡ್‌ಶೋ ನಡೆಸುವುದಾಗಿ ದುಬೈ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

ಬಹರೈನ್‌ ಕೂಡ ಭಾರತದಲ್ಲಿ ಪ್ರವಾಸೋ ದ್ಯಮ ಕಚೇರಿ ತೆರೆದಿದೆ. ಅಲ್ಲದೆ, ಹೈಪ್ರೊಫೈಲ್‌ ಭಾರತೀಯರ ವಿವಾಹ ಕಾರ್ಯಕ್ರಮಗಳನ್ನು ತಮ್ಮ ದೇಶಗಳಲ್ಲಿ ಆಯೋಜಿಸುವಂತೆ ಮಾಡಲೂ ಬಹರೈನ್‌ ಮುಂದಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ