ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
Team Udayavani, Sep 20, 2024, 1:46 PM IST
ನವದೆಹಲಿ: ವೇಗವಾಗಿ ಚಲಿಸುತ್ತಿದ್ದ ಬೈಕಿಗೆ ರಾಂಗ್ ರೂಟ್ ನಲ್ಲಿ ಬಂದ ಕಾರೊಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುಗ್ರಾಮ್‌ನಲ್ಲಿ ಕಳೆದ ಭಾನುವಾರ ಸಂಭವಿಸಿದ್ದು ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೃತ ದುರ್ದೈವಿಯನ್ನು ದೆಹಲಿಯ ದ್ವಾರಕಾ ನಿವಾಸಿಯಾಗಿರುವ ಅಕ್ಷತ್ ಗಾರ್ಗ್(23) ಎಂದು ಗುರುತಿಸಲಾಗಿದೆ.
ಕಳೆದ ಭಾನುವಾರ ಡಿಎಲ್‌ಎಫ್ ಎರಡನೇ ಹಂತದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ತನ್ನ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು ಅಕ್ಷತ್ ಗಾರ್ಗ್ ಸ್ನೇಹಿತ ಮಾಡಿರುವ ವಿಡಿಯೋ ದಲ್ಲಿ ಭಯಾನಕ ದೃಶ್ಯ ಸೆರೆಯಾಗಿದೆ.
ಅಕ್ಷತ್ ಹಾಗೂ ಇನ್ನೋರ್ವ ಸ್ನೇಹಿತ ಎರಡು ಬೈಕ್ ನಲ್ಲಿ ಮತ್ತೋರ್ವ ಸ್ನೇಹಿತನನ್ನು ಭೇಟಿಯಾಗಲು ಬೈಕ್ ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಸೆರೆಯಾದ ವಿಡಿಯೋದಲ್ಲಿ ಅಕ್ಷತ್ ಹೆಲ್ಮೆಟ್ ಧರಿಸಿದ್ದು ವೇಗವಾಗಿ ಬೈಕನ್ನು ಚಲಾಯಿಸಿಕೊಂಡು ಹೋಗಿದ್ದಾನೆ, ಮುಂದೆ ತಿರುವಿನಲ್ಲಿ ರಸ್ತೆಯ ಬಲಭಾಗಕ್ಕೆ ಬಂದಿದ್ದು ಈ ವೇಳೆ ರಾಂಗ್ ಸೈಡ್ ನಲ್ಲಿ ಬಂದ ಎಸ್ ಯುವಿ ಕಾರಿಗೆ ವೇಗವಾಗಿ ಡಿಕ್ಕಿ ಹೊಡೆದು ಕೆಲ ದೂರ ಎಸೆಯಲ್ಪಟ್ಟಿದ್ದಾನೆ, ಗಂಭೀರ ಗಾಯಗೊಂಡಿದ್ದ ಅಕ್ಷತ್ ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಅಷ್ಟೋತ್ತಿಗಾಗಲೇ ಅಕ್ಷತ್ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರು, ಬೈಕು ಎರಡೂ ವಾಹನಗಳು ನುಜ್ಜು ಗುಜ್ಜಾಗಿದೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಗುರುಗ್ರಾಮ್ ಪೊಲೀಸರು ಕಾರು ಚಾಲಕನನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
View this post on Instagram
ಇದನ್ನೂ ಓದಿ: Supreme court ಯೂಟ್ಯೂಬ್ ಲೈವ್ ಸ್ಟ್ರೀಮ್ ಚಾನೆಲ್ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salman Khan ವಿರುದ್ದದ ಸೇಡು? ..; ಎಲ್ಲಾ ಕೋನಗಳಲ್ಲಿ ತನಿಖೆ ಎಂದ ಮುಂಬಯಿ ಪೊಲೀಸರು
Agra; 3 ದಿನ ಒತ್ತೆಯಾಳಾಗಿಟ್ಟು ಡ್ಯಾನ್ಸರ್ ಮೇಲೆ ಅತ್ಯಾ*ಚಾರಗೈದ ಇವೆಂಟ್ ಮ್ಯಾನೇಜರ್
Miracle: 15 ಅಡಿ ಆಳದ ಬಾವಿಗೆ ಬಿತ್ತು ನವದಂಪತಿಯ ಕಾರು; ಬದುಕಿ ಬಂದಿದ್ದೇ ಪವಾಡ!
Mumbai: ಬಿಗ್ ಬಾಸ್ ಶೂಟಿಂಗ್ ಅರ್ಧದಲ್ಲೇ ಬಿಟ್ಟು ಆಸ್ಪತ್ರೆಗೆ ಧಾವಿಸಿದ ಸಲ್ಮಾನ್ ಖಾನ್
Baba Siddique Case: ಲಾರೆನ್ಸ್ ಬಿಷ್ಣೋಯ್ ಕೈವಾಡ ಶಂಕೆ; ಇಬ್ಬರು ಶೂಟರ್ ಗಳ ಬಂಧನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.