ಗುರುಗ್ರಾಮ:ಟೈಟ್ ಆಗಿ ಪೊಲೀಸಪ್ಪನ ಹುಚ್ಚಾಟ;ಸಾರ್ವಜನಿಕರ ಪರದಾಟ!
Team Udayavani, Jul 31, 2018, 9:50 AM IST
ಗುರುಗ್ರಾಮ: ನಗರದ ಶೀಟ್ಲಾ ಮಠ ರಸ್ತೆಯಲ್ಲಿ ಭಾನುವಾರ ರಾತ್ರಿ ಪೊಲೀಸ್ ಅಧಿಕಾರಿಯೊಬ್ಬ ಮದ್ಯಪಾನ ಮಾಡಿ ರಸ್ತೆ ಮಧ್ಯದಲ್ಲಿಯೇ ಕಾರು ನಿಲ್ಲಿಸಿ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟು ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ತರುಣ್ ದಹಿಯಾ ಎನ್ನುವ ಕ್ರೈಂ ವಿಭಾಗದ ಹಿರಿಯ ಅಧಿಕಾರಿ ಸ್ನೇಹಿತನೊಂದಿಗೆ ಕಂಠ ಪೂರ್ತಿ ಕುಡಿದು ರಸ್ತೆ ಮಧ್ಯದಲ್ಲಿಯೇ ಟೊಯೋಟಾ ಫಾರ್ಚುನರ್ ಎಸ್ಯುವಿ ಕಾರನ್ನು ನಿಲ್ಲಿಸಿ ಮ್ಯೂಸಿಕ್ ಹಾಕಿ ಡಾನ್ಸ್ ಮಾಡುತ್ತಿದ್ದ , ಇದರಿಂದಾಗಿ ನೂರಾರು ವಾಹನಗಳು ಜಮಾವಣೆಗೊಂಡು ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಪರದಾಡಬೇಕಾಯಿತು.
ಸ್ಥಳಕ್ಕಾಗಮಿಸಿದ ಪೊಲೀಸರೊಂದಿಗೂ ಅನುಚಿತವಾಗಿ ವರ್ತಿಸಿದ್ದು, ಬಳಿಕ ಇಬ್ಬರನ್ನೂ ಬಲತ್ಕಾರವಾಗಿ ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.