ಹಜ್‌ ಯಾತ್ರಿಕರಿಗೆ ಪೋಲಿಯೋ ಲಸಿಕೆ ಕೊರತೆ

Team Udayavani, Apr 22, 2019, 6:15 AM IST

ಹೊಸದಿಲ್ಲಿ: ಕೆಲವೇ ದಿನಗಳ ಹಿಂದೆ ಪೋಲಿಯೋ ಲಸಿಕೆಯಲ್ಲಿ ಕಲಬೆರಕೆ ಪತ್ತೆಯಾದ್ದರಿಂದ, ಈವರೆಗೆ ಪೋಲಿಯೋ ಲಸಿಕೆ ಪೂರೈಸುತ್ತಿದ್ದ ಕಂಪೆನಿಯಿಂದ ಖರೀದಿ ನಿಲ್ಲಿಸಲಾಗಿದೆ.

ಇದರಿಂದಾಗಿ ಈಗ ಹಜ್‌ ಯಾತ್ರೆಗೆ ತೆರಳುವವರಿಗೆ ಪೋಲಿಯೋ ಲಸಿಕೆ ಕೊರತೆ ಎದುರಾಗಿದೆ. ಹಜ್‌ ಯಾತ್ರೆಗೆ ತೆರಳುವ ಮೂರು ವರ್ಷಕ್ಕೂ ಮುನ್ನ ಪೋಲಿಯೋ ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರವನ್ನು ಯಾತ್ರಿಕರು ಸಲ್ಲಿಸುವುದು ಕಡ್ಡಾಯವಾಗಿದೆ.

ಹೀಗಾಗಿ ಸರಕಾರಕ್ಕೆ ಈಗ ಒಟ್ಟು 1.47 ಲಕ್ಷ ಡೋಸ್‌ ಅಗತ್ಯವಿದೆ. ಇದಕ್ಕಾಗಿ ಸನೋಫಿ ಹಾಗೂ ಗ್ಲಾಕೊÕà ಸ್ಮಿತ್‌ ಕ್ಲೈನ್‌ ಸಂಸ್ಥೆಗಳ ಜೊತೆಗೆ ಸರಕಾರ ಮಾತುಕತೆ ನಡೆಸುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ