ಆಮಂತ್ರಣವಿಲ್ಲದೆ ಮದುವೆಗೆ ಹಾಜರ್‌: ವಿದ್ಯಾರ್ಥಿಗಳಿಗೆ ಎಚ್ಚರಿಕೆ

Team Udayavani, Mar 22, 2019, 12:30 AM IST

ಹೊಸದಿಲ್ಲಿ: 2009ರ ಹಿಟ್‌ ಚಿತ್ರವಾದ “ತ್ರೀ ಈಡಿಯಟ್ಸ್‌’ನಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಅಮೀರ್‌ ಖಾನ್‌ ಹಾಗೂ ಅವರ ಇಬ್ಬರು ಸ್ನೇಹಿತರು ತಮಗೆ ಆಮಂತ್ರಣವಿಲ್ಲದ ಮದುವೆಗೆ ಹೋದಂತೆ, ಕುರುಕ್ಷೇತ್ರದ ನ್ಯಾಷ ನಲ್‌ ಇನ್ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎನ್‌ಐಟಿ) ಹಾಸ್ಟೆಲ್‌ಗ‌ಳಲ್ಲಿರುವ ವಿದ್ಯಾರ್ಥಿಗಳು ಆ ನಗರದಲ್ಲಿ ನಡೆಯುತ್ತಿರುವ ಮದುವೆಗಳಿಗೆ ಆಮಂತ್ರಣವಿಲ್ಲದೆ ಹೋಗುತ್ತಿರುವುದು ಬೆಳಕಿಗೆ ಬಂದಿದೆ. 

ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಲೇಜಿನ ಆಡಳಿತ ಮಂಡಳಿ,  ವಿದ್ಯಾರ್ಥಿಗಳಿಗೆ ನೋಟಿಸ್‌ ಜಾರಿಗೊಳಿಸಿದ್ದು, ‌”ಅನಾಗರಿಕ ವರ್ತನೆ’ಗಳಿಂದ ದೂರ ಇರುವಂತೆ ಸೂಚಿಸಿದೆ. ಮುಖ್ಯ ವಾರ್ಡನ್‌ರ ಸೂಚನೆಯಲ್ಲಿ, ಆಮಂತ್ರಣವಿಲ್ಲದ ಮದುವೆಗಳಿಗೆ ಹೋಗುವುದರಿಂದ  ಎನ್‌ಐಟಿ ಹೆಸರು ಹಾಳಾಗುತ್ತದೆ. ಇದನ್ನು ಉಲ್ಲಂ ಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ