ದಿಲ್ಲಿ ದೇವಳ, ಚರ್ಚ್, ಮಸೀದಿ, ಗುರುದ್ವಾರಕ್ಕೆ ನಿಕ್ಕಿ ಹ್ಯಾಲಿ ಭೇಟಿ
Team Udayavani, Jun 28, 2018, 3:12 PM IST
ಹೊಸದಿಲ್ಲಿ : ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವ ಭಾರತೀಯ ಮೂಲದ ನಿಕ್ಕಿ ಹ್ಯಾಲಿ ಅವರಿಂದು ಇಲ್ಲಿನ ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರಕ್ಕೆ ಭೇಟಿ ಕೊಟ್ಟರು.
ಜನರ ಸ್ವಾತಂತ್ರ್ಯದಷ್ಟೆ ಧಾರ್ಮಿಕ ಸ್ವಾತಂತ್ರ್ಯವೂ ಮುಖ್ಯವಾಗಿದೆ ಎಂದು ಹ್ಯಾಲಿ ಅವರು ಈ ಸಂದರ್ಭದಲ್ಲಿ ಹೇಳಿದರು. ಅವರು ಇಲ್ಲಿನ ಗೌರೀಶಂಕರ ಮಂದಿರ, ಜಾಮಾ ಮಸೀದಿ, ಗುರುದ್ವಾರ ಸಿಸ್ ಗಂಜ್ ಸಾಹಿಬ್ ಮತ್ತು ಸೆಂಟ್ರಲ್ ಬ್ಯಾಪ್ಟಿಸ್ಟ್ ಚರ್ಚ್ ಗೆ ಇಂದು ಬೆಳಗ್ಗೆ ಭೇಟಿ ನೀಡಿದರು.
ಪಂಜಾಬಿನ ಸಿಕ್ಖ್ ವಲಸಿಗರೋರ್ವರ ಪುತ್ರಿಯಾಗಿರುವ ನಿಕ್ಕಿ ಹ್ಯಾಲಿ ಅವರು ಗುರುದ್ವಾರದಲ್ಲಿ ಲಂಗರ್ಗಾಗಿ ರೋಟಿಯನ್ನೂ ಸಿದ್ಧಪಡಿಸಿದರು.