ಮನೆ ಬಾಗಿಲಲ್ಲೇ ಲಸಿಕೆ ನೀಡಲು “ಹರ್ ಘರ್ ದಸ್ತಕ್’
ಕೇಂದ್ರ ಆರೋಗ್ಯ ಸಚಿವ ಮಾಂಡಿಯಾ ಘೋಷಣೆ
Team Udayavani, Oct 28, 2021, 6:30 AM IST
ನವದೆಹಲಿ: ದೇಶದ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ತಲುಪಿಸುವ ನಿಟ್ಟಿನಲ್ಲಿ ಮುಂದಿನ ತಿಂಗಳಿನಿಂದ “ಹರ್ ಘರ್ ದಸ್ತಕ್’ ಆಂದೋಲನ ಆರಂಭಿಸುವುದಾಗಿ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯಾ ತಿಳಿಸಿದ್ದಾರೆ.
ಬುಧವಾರದಂದು ಲಸಿಕೆ ಅಭಿಯಾನದ ಕುರಿತಾಗಿ ರಾಜ್ಯಗಳ ಆರೋಗ್ಯ ಸಚಿವರ ಸಭೆಯ ಬಳಿಕ ಮಾತನಾಡಿದ ಅವರು, ದೇಶದಲ್ಲಿ ಎರಡನೇ ಡೋಸ್ ಲಸಿಕೆ ಪಡೆಯಲು ಅರ್ಹರಿರುವವರಿಗೆ ಮತ್ತು ಇನ್ನೂ ಮೊದಲನೇ ಡೋಸ್ ಲಸಿಕೆ ಪಡೆಯದವರಿಗೆ ಮುಂದಿನ ತಿಂಗಳಿನಿಂದ ಮನೆ ಬಾಗಿಲಿಗೇ ತೆರಳಿ ಲಸಿಕೆ ನೀಡಲಾಗುವುದು. ಈ ಆಂದೋಲನದಲ್ಲಿ, ಲಸಿಕೆ ಪಡೆಯುವುದಕ್ಕೆ ಅರ್ಹರಿರುವ ಜನಸಂಖ್ಯೆಯಲ್ಲಿ ಇನ್ನೂ ಶೇ. 50 ಜನಸಂಖ್ಯೆಗೆ ಲಸಿಕೆ ನೀಡಿರದ 48 ಜಿಲ್ಲೆಗಳನ್ನು ವಿಶೇಷವಾಗಿ ಪರಿಗಣಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ದೇಶದಲ್ಲಿ ಈಗಾಗಲೇ ಶೇ. 77 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಮತ್ತು ಶೇ. 32 ಮಂದಿ 2ನೇ ಡೋಸ್ ಲಸಿಕೆ ಪಡೆದಿದ್ದಾರೆ ಎಂದೂ ಕೇಂದ್ರ ಸಚಿವ ಮನಸುಖ ಮಾಂಡವಿಯಾ ತಿಳಿಸಿದ್ದಾರೆ.