ಸ್ಪರ್ಧೆಗೆ ಅಡ್ಡಿಯಾದ ಆದೇಶ ಪ್ರಶ್ನಿಸಿ ಹಾರ್ದಿಕ್ ಪಟೇಲ್ ಸುಪ್ರೀಂ ಕೋರ್ಟಿಗೆ
Team Udayavani, Apr 1, 2019, 5:17 PM IST
ಹೊಸದಿಲ್ಲಿ : 2015ರ ವೀಸ್‌ಪುರ ದೊಂಬಿ ಪ್ರಕರಣದಲ್ಲಿ ತಾನು ದೋಷಿ ಎಂದು ಘೋಷಿಸಲಾದುದಕ್ಕೆ ತಡೆಯಾಜ್ಞೆ ನೀಡಬೇಕೆಂಬ ತನ್ನ ಕೋರಿಕೆಯನ್ನು ತಿರಸ್ಕರಿಸಿರುವ ಗುಜರಾತ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರು ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದಾರೆ.
ಹಾರ್ದಿಕ್ ಅವರ ಮನವಿ ತುರ್ತು ವಿಚಾರಣೆಗಾಗಿ ಮಂಗಳವಾರ ಉಲ್ಲೇಖಗೊಳ್ಳುವ ಸಾಧ್ಯತೆ ಇದೆ. ಹಾರ್ದಿಕ್ ಅವರು ಲೋಕಸಭೆಗೆ ಸ್ಪರ್ಧಿಸುವುದಕ್ಕೆ ಅಡ್ಡಿ ಉಂಟುಮಾಡಿರುವ ಹೈಕೋರ್ಟಿನ ಮಾರ್ಚ್ 29ರ ಆದೇಶಕ್ಕೆ ತಡೆ ನೀಡಬೇಕೆಂದು ಹಾರ್ದಿಕ್ ಅವರ ವಕೀಲರು ಕೋರಲಿದ್ದಾರೆ.
ಹಾರ್ದಿಕ್ ಪಟೇಲ್ ಅವರು ಜಾಮ್‌ನಗರದಿಂದ ಕಾಂಗ್ರೆಸ್ ಟಿಕೆಟ್ ಮೂಲಕ ಲೋಕಸಭೆಗೆ ಸ್ಪರ್ಧಿಸುವ ತಯಾರಿ ನಡೆಸುತ್ತಿದ್ದಾರೆ; ನಾಮಪತ್ರ ಸಲ್ಲಿಕೆಗೆ ಎಪ್ರಿಲ್ 4 ಕೊನೇ ದಿನವಾಗಿದೆ.
ಗುಜರಾತ್‌ನ 26 ಲೋಕಸಭಾ ಸೀಟುಗಳಿಗೆ ಎಪ್ರಿಲ್ 23ರಂದು ಚುನಾವಣೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವರದಕ್ಷಿಣೆ ಕಿರುಕುಳ: ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ-ಪತಿ ಅಪರಾಧಿ: ಕೇರಳ ಕೋರ್ಟ್
ಹಳಿ ತಪ್ಪಿದ ಗೂಡ್ಸ್ ರೈಲು : ಗೋವಾ-ಕರ್ನಾಟಕ ರೈಲು ಸಂಚಾರದಲ್ಲಿ ವ್ಯತ್ಯಯ
ಜಮ್ಮು-ಕಾಶ್ಮೀರ: ಮೂವರು ಲಷ್ಕರ್ ಭಯೋತ್ಪಾದಕರ ಬಂಧನ, ಶಸ್ತ್ರಾಸ್ತ್ರ, ಸ್ಫೋಟಕ ವಶ
ಜ್ಞಾನವಾಪಿ ಮಸೀದಿ ಪ್ರಕರಣ: ಅರ್ಜಿಯ ಸಿಂಧುತ್ವದ ಬಗ್ಗೆ ಮೇ 24ರಂದು ವಾರಾಣಸಿ ಕೋರ್ಟ್ ಆದೇಶ
ಕುರಾನ್ ಓದಲಿ,ಆದರೆ ಮದರಸಾಗಳ ಶಿಕ್ಷಣ ಅಸ್ತಿತ್ವದಲ್ಲಿರಬಾರದು: ಹಿಮಂತ ಬಿಸ್ವಾ