ಉಪಸಭಾಪತಿ: ಬಿ.ಕೆ. ಹರಿಪ್ರಸಾದ್ ವಿಪಕ್ಷಗಳ ಅಭ್ಯರ್ಥಿ
Team Udayavani, Aug 9, 2018, 6:00 AM IST
ಹೊಸದಿಲ್ಲಿ: ರಾಜ್ಯಸಭೆಯ ಉಪ ಸಭಾಪತಿ ಸ್ಥಾನಕ್ಕೆ ಕನ್ನಡಿಗ, ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ (64) ಮತ್ತು ಜೆಡಿಯುನ ಹರಿವಂಶ್ ನಾರಾಯಣ್ ಸಿಂಗ್ (62) ನಡುವೆ ಸ್ಪರ್ಧೆ ಏರ್ಪಟ್ಟಿದೆ. ಗುರುವಾರ ಚುನಾವಣೆ ನಡೆಯಲಿದ್ದು, ಎನ್‌ಡಿಎ ಪರ ಹರಿವಂಶ್ ನಾರಾಯಣ್ ಸಿಂಗ್ ಮತ್ತು ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಹರಿಪ್ರಸಾದ್ ಬುಧವಾರ ನಾಮ ಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಯದೆ ಎನ್‌ಡಿಎಯಿಂದ ಹರಿವಂಶ್ ಹೆಸರು ಘೋಷಣೆಯಾಗುತ್ತಿದ್ದಂತೆ, ವಿಪಕ್ಷಗಳ ಪಾಳಯದಲ್ಲಿ ರಾಜಕೀಯ ಲೆಕ್ಕಾಚಾರವೇ ಬದಲಾಯಿತು. ಪ್ರಾದೇಶಿಕ ಪಕ್ಷಗಳು ಹಿಂದೆ ಸರಿದು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಿಸಿದವು.
ಎನ್‌ಡಿಎ ಅಭ್ಯರ್ಥಿ ಪರ ಶಿವಸೇನೆ ಮತ್ತು ಅಕಾಲಿ ದಳ ಮತ ಹಾಕುವುದಾಗಿ ಘೋಷಣೆ ಮಾಡಿವೆ. ಕಾಂಗ್ರೆಸ್‌ನ ವಿರೋಧಿಯಾಗಿರುವ, 6 ಸದಸ್ಯ ಬಲ ಹೊಂದಿರುವ ಟಿಆರ್‌ಎಸ್ ಕೂಡ ಎನ್‌ಡಿಎ ಬೆಂಬಲಿಸುವ ಸಾಧ್ಯತೆಯಿದೆ. ಬಿಜು ಜನತಾ ದಳ ನಾಯಕ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಪ್ರಧಾನಿ ಮೋದಿ, ನಿತೀಶ್ ಕುಮಾರ್ ಕರೆ ಮಾಡಿ ಬೆಂಬಲ ನೀಡುವಂತೆ ಕೋರಿದ್ದಾರೆ. 9 ಸಂಸದರನ್ನು ಹೊಂದಿರುವ ಬಿಜೆಡಿ ನಿರ್ಣಾಯಕವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಆಡಳಿತ, ವಿಪಕ್ಷಗಳ ನಾಯಕರು ತಮ್ಮ ತಮ್ಮ ಸದಸ್ಯರಿಗೆ ವಿಪ್ ನೀಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಿ.ಟಿ.ರವಿ ನಕಾರ
ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣ: ಯಾಸಿನ್ ಮಲಿಕ್ ಗೆ ಜೀವಾವಧಿ ಶಿಕ್ಷೆ
ಗೋವಾದಲ್ಲಿ ಸನ್ಬರ್ನ್ ಫೆಸ್ಟಿವಲ್ ಆಯೋಜನೆಗೆ ಅವಕಾಶವಿಲ್ಲ : ಸಚಿವ ಖಂವಟೆ
ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ
ಭದ್ರತಾಲೋಪ? ತಮಿಳುನಾಡಿನಲ್ಲಿ ಬಿಜೆಪಿ ಮುಖಂಡನ ಹತ್ಯೆ, ಎಐಡಿಎಂಕೆ ಆಕ್ರೋಶ